More

    ಸೀತಾ ಜಯಂತಿ ಮುಹೂರ್ತ ಯಾವಾಗ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

    ನವದೆಹಲಿ: ನಾಳೆ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ. ಇದು ಭೂತಾಯಿಯ ಪುತ್ರಿ ಸೀತಾಮಾತೆಯ ಜನುಮದಿನ. ನಮ್ಮ ದೇಶ ಮಾತ್ರವಲ್ಲದೇ ಕೆಲವು ವಿದೇಶಗಳಲ್ಲಿಯೂ ಸೀತಾ ಜಯಂತಿಯನ್ನು ಆಚರಿಸಲಾಗುತ್ತದೆ.

    ಜನಕ ಮಹಾರಾಜ ಯಜ್ಞಕ್ಕಾಗಿ ಭೂಮಿಯನ್ನು ಉಳುಮೆ ಮಾಡುವ ಸಂದರ್ಭದಲ್ಲಿ ಸಿಕ್ಕ ಮಗುವೇ ಸೀತಾ ಎಂಬ ನಂಬಿಕೆ ಇದೆ. ಸುಂದರವಾದ ಚಿನ್ನದ ಪೆಟ್ಟಿಗೆಯಲ್ಲಿ ಹಸುಗೂಸು ಇತ್ತು. ನಂತರ ಆ ಮಗುವನ್ನು ಜನಕ ಮಹಾರಾಜ ದತ್ತುಪುತ್ರಿಯನ್ನಾಗಿ ಸ್ವೀಕರಿಸಿದ. ಆದ್ದರಿಂದ ಈಕೆ ಭೂಮಿಯ ಪುತ್ರಿ.

    ಅನೇಕ ಜನಪ್ರಿಯ ನಂಬಿಕೆಗಳ ಪ್ರಕಾರ, ಸೀತಾಮಾತೆ ಪುಷ್ಯ ನಕ್ಷತ್ರದಲ್ಲಿ ಮಂಗಳವಾರ ಜನಿಸಿದಳು. ಈಚೆ ಪತಿಯಾಗಿ ಪಡೆದ ಶ್ರೀರಾಮಚಂದ್ರ ಕೂಡ ನವಮಿ ತಿಥಿಯಲ್ಲಿ ಜನಿಸಿದ್ದು. ಹಿಂದೂ ಕ್ಯಾಲೆಂಡರ್​ ಪ್ರಕಾರ, ರಾಮ ನವಮಿಯ ಒಂದು ತಿಂಗಳ ನಂತರ ಸೀತಾ ಜಯಂತಿಯನ್ನು ಆಚರಿಸಲಾಗುತ್ತದೆ.

    ನವಮಿ ಪ್ರಾರಂಭ: ಮೇ 1 ಮಧ್ಯಾಹ್ನ 01:26
    ನವಮಿ ಮುಕ್ತಾಯ: ಮೇ 2 ಬೆಳಗ್ಗೆ 11:35
    ಪೂಜಾ ಸಮಯ:
    ಸೀತಾ ನವಮಿ ಮುಹೂರ್ತ: ಬೆಳಗ್ಗೆ 10.58ರಿಂದ ಮಧ್ಯಾಹ್ನ 1.38
    ಅವಧಿ: 2 ಗಂಟೆ 40 ನಿಮಿಷಗಳು
    (ಮಾಹಿತಿ: ದೃಕ್ ಪಂಚಾಂಗ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts