More

    ಸಿಎಎ ಜಾರಿ ಸ್ವಾಗತಿಸಿದ ಸೀಮಾ ಹೈದರ್​ಗೆ ಸಿಗಲಿದ್ಯಾ ಭಾರತೀಯ ಪೌರತ್ವ?

    ಉತ್ತರಪ್ರದೇಶ: ಕಳೆದ ವರ್ಷ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್​, ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದರು. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿರುವ ತನ್ನ ಪ್ರಿಯಕರ ಸಚಿನ್​ನನ್ನು ಹುಡುಕಿಕೊಂಡು ಭಾರತಕ್ಕೆ ಬಂದ ಸೀಮಾ, ಪಾಕಿಸ್ತಾನಿ ಪ್ರಜೆ ಎಂಬುದು ಸದ್ಯ ಎಲ್ಲರಿಗೂ ತಿಳಿದಿರುವ ಸಂಗತಿ.

    ಇದನ್ನೂ ಓದಿ: ನೆರೆರಾಷ್ಟ್ರಗಳ ಮುಸ್ಲಿಮೇತರರಿಗೆ ಪೌರತ್ವ ಗ್ಯಾರಂಟಿ: ಪರ-ವಿರೋಧ ಹೋರಾಟದ ನಂತರ ತಾರ್ಕಿಕ ಅಂತ್ಯ

    ಇದೀಗ ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸುತ್ತಿದ್ದಂತೆ ಸೀಮಾ ಹೈದರ್ ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನದ ನಿಯಮಗಳನ್ನು ತಿಳಿಸುವ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹಿಂದೂ ಧರ್ಮಕ್ಕೆ ಬದಲಾಗುವುದರ ಜತೆಗೆ ಮತ್ತು ಪತಿ ಸಚಿನ್ ಮೀನಾ ಅವರನ್ನು ವಿವಾಹವಾದ ಹೈದರ್, ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಮೆಚ್ಚಿದ್ದಾರೆ. ಸಿಎಎ ಜಾರಿಯಾದ ಹಿನ್ನೆಲೆ ತನಗೆ ಭಾರತೀಯ ಪೌರತ್ವ ಪಡೆಯಲು ಸಹಾಯ ಆಗುತ್ತದೆ ಎಂದು ಆಕೆ ನಿರೀಕ್ಷಿಸಿದ್ದಾರೆ. ಅಸಲಿಗೆ ಸೀಮಾಗೆ ಪೌರತ್ವ ಸಿಗುವುದೇ?

    ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ಕಲ್ಪಿಸಲು ಸಂಸತ್ತು ಅಂಗೀಕರಿಸಿದ CAAಯ ನೇರ ಫಲಾನುಭವಿಗೆ ಸೀಮಾ ಹೈದರ್ ಒಳಪಡುವುದಿಲ್ಲ. ಈ ವಿಷಯ ತಿಳಿದಿದ್ದರೂ ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿರುವ ಹೈದರ್​, ತಾನು ಭಾರತದಲ್ಲಿ ನೆಲೆಸಿದ್ದೇನೆ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಥೇಟ್​ ಧೋನಿಯಂತೆ ಕಾಣಿಸುತ್ತಿದೆ 3D ಮಾದರಿಯ ಚಾಣಕ್ಯ! ಹೀಗಾಗಲು ಹೇಗೆ ಸಾಧ್ಯ? ಎಂದ ಮಾಹಿ ಫ್ಯಾನ್ಸ್​

    ಇತ್ತೀಚೆಗಿನ ಸಂದರ್ಶನದಲ್ಲಿ ಕೂಡ ತಾನು ಹಿಂದೂ ಆಗಿದ್ದೇನೆ ಮತ್ತು ತನ್ನ ತಾಯ್ನಾಡಿಗೆ ಮರಳಲು ನಿರಾಕರಿಸಿದ್ದೇನೆ ಎಂದು ಆಕೆ ಹೇಳಿದ್ದು, ಮಕ್ಕಳು ಹಾಗೂ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇವೆ. ಪ್ರಧಾನಿಯವರು ನನಗೆ ಭಾರತೀಯ ಪೌರತ್ವ ಕೊಡಬೇಕು ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಸಹ ಪತ್ರ ಬರೆದು ಕೋರಿದ್ದರು.

    “ಭಾರತ ಸರ್ಕಾರವು ಇಂದು ನಮ್ಮ ದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಜಾರಿಗೆ ತಂದಿದೆ. ಅದರ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ಅದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇವೆ. ನಿಜವಾಗಿಯೂ ಮೋದಿ ಜೀ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ನಾನು ಅವರಿಗೆ ಸದಾ ಋಣಿಯಾಗಿರುತ್ತೇನೆ” ಎಂದು ಹೈದರ್ ವಿಡಿಯೋ ಸಂದೇಶದಲ್ಲಿ ಹರಿಬಿಟ್ಟಿದ್ದಾರೆ.

    ಇದನ್ನೂ ಓದಿ: ಜ್ಞಾನವಾಪಿಯಂತೆ ಭೋಜಶಾಲಾ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ ಸೂಚನೆ

    ಇದೆಲ್ಲದಕ್ಕೂ ಮೀರಿ ಸೀಮಾ ಮುಸ್ಲಿಂ ಆಗಿದ್ದು, ಕಟ್-ಆಫ್ ದಿನಾಂಕದ ನಂತರ ಭಾರತಕ್ಕೆ ಬಂದಿರುವುದರಿಂದ ಸಿಎಎ ಫಲಾನುಭವಿಯಾಗುವುದಿಲ್ಲ ಎಂಬುದು ವರದಿ,(ಏಜೆನ್ಸೀಸ್).

    ಲೀಕ್ ಆಯ್ತು ‘ಗೂಗ್ಲಿ’ ನಟಿಯ ಮದುವೆ ಆಮಂತ್ರಣ ಪತ್ರಿಕೆ! ಸ್ಥಳ ಎಲ್ಲಿ? ಎಂದ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts