More

    ಮನುಷ್ಯನಲ್ಲಿ ಭೇದವಿಲ್ಲದ ಜೀವನ ಅಗತ್ಯ

    ಸೇಡಂ: ಹರಿವ ನದಿ, ಕುಡಿವ ನೀರು, ಜಗವ ಹೊತ್ತ ಭೂಮಿ, ಬಿಸುವ ಗಾಳಿಗೆ ಯಾವುದೇ ಭೇದವಿಲ್ಲ. ಆದರೆ ಮನುಷ್ಯರಾದ ನಮ್ಮೊಳಗೆ ಸಾಕಷ್ಟು ತಾರತಮ್ಯಗಳಿವೆ. ಪ್ರತಿಯೊಬ್ಬರೂ ದ್ವೇಷವನ್ನು ಬಿಟ್ಟು, ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರವಚನಕಾರ ಅನ್ನದಾನೇಶ್ವರ ಶಾಸ್ತ್ರೀ ಹೇಳಿದರು.

    ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ದಾಸೋಹ ಭವನ ಹಾಗೂ ಗುರು ಭವನದ ಉದ್ಘಾಟನೆ ನಿಮಿತ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ, ನಶಿಸಿ ಹೋಗುವ ಸಂಪತ್ತಿನ ಮೇಲಿನ ಮೋಹ, ಮಮಕಾರ ಬಿಡಬೇಕು. ಮೊದಲು ಮಾನವರಾಗಿ ಬದುಕುವುದನ್ನು ಕಲಿಯಬೇಕು ಎಂದು ತಿಳಿಸಿದರು.

    ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವನಾಗಯ್ಯ ಶಾಸ್ತ್ರೀ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಣಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಪ್ರಮುಖರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಶರಣಬಸಪ್ಪ ಹಾಗರಗಿ, ಡಾ.ಸದಾನಂದ ಬೂದಿ, ಅನಂತರೆಡ್ಡಿ ಪಾಟೀಲ್, ಶಿವಾರೆಡ್ಡಿ ಹೂವಿನಬಾವಿ, ಶಿವಶರಣಪ್ಪ ಭಾಂಜಿ, ಶ್ರೀಮಂತ ಅವಂಟಿ, ಆನಂದ ಸಕ್ರಿ, ವೆಂಕಟೇಶ ಸಕ್ರಿ, ಭೀಮರಾವ ಯಡಗಾ, ಬಸವರಾಜ ಹಲಚೇರಿ ಇತರರಿದ್ದರು. ವೀರೇಶ ಹೂಗಾರ ಸ್ವಾಗತಿಸಿ, ನಿರೂಪಣೆ ಮಾಡಿದರು. ಶಾಂತಾನಂದ ಗವಾಯಿ ಸಂಗೀತ ಸೇವೆ ನೀಡಿದರು. ಅಭಿಷೇಕ ವಿಶ್ವಕರ್ಮ ತಬಲಾ ಸಾಥ್ ನೀಡಿದರು.

    ಸಿರಿನಾಡ ಮೇರು ಶಿಖರ ಧ್ವನಿ ಸುರುಳಿ ಜನಾರ್ಪಣೆ: ಸೇಡಂನಲ್ಲಿ ಆಯೋಜಿಸಿದ್ದ ಪುರಾಣ ಕಾರ್ಯಕ್ರಮದಲ್ಲಿ ಸಾಹಿತಿ ಶರಣಪ್ಪ ಹೂಗಾರ ರಚಿಸಿದ, ನವ ತರುಣ ನಾಟ್ಯ ಸಂಘ ಹೊರತಂದಿರುವ ಸಿರಿನಾಡ ಮೇರು ಶಿಖರ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಗಿರಿಮಲ್ಲಣ್ಣ ಭಂಟನಳ್ಳಿ ನಿರೂಪಣೆ ನೀಡಿದ್ದು, ದೇವಿಂದ್ರಕುಮಾರ ಪತ್ತಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಾಯಕರಾದ ವೀರೇಶ ಹೂಗಾರ, ಸಿದ್ದು ಕಾಮಣಿ, ಹಣಮಂತರಾವ ಬಿರಾದಾರ, ವೀರೇಂದ್ರ ಭಂಟನಳ್ಳಿ, ಮೇಘನಾ ಹಯ್ಯಾಳ ಧ್ವನಿಯಾಗಿದ್ದಾರೆ. ನವ ತರುಣ ನಾಟ್ಯ ಸಂಘದ ಅಶೋಕ ಪವಾರ್, ರಮೇಶ ಮಾಲಪಾಣಿ, ಸಿದ್ದಣ್ಣ ಶೆಟ್ಟಿ, ಬಸವರಾಜ ಕೋಸಗಿ ನಿರ್ಮಾಣದ ರೂವಾರಿಗಳಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts