More

    ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ, ಮೊದಲ ದಿನ 929 ವಿದ್ಯಾರ್ಥಿಗಳು ಗೈರು

    ಬಳ್ಳಾರಿ: ಜಿಲ್ಲೆಯ 32 ಕೇಂದ್ರಗಳಲ್ಲಿ ಬುಧವಾರ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳು ಆರಂಭವಾದವು. ಮೊದಲ ದಿನ ಇತಿಹಾಸ, ಭೌತಶಾಸ್ತ್ರ ಹಾಗೂ ಗಣಿತ ಬೇಸಿಕ್ ವಿಷಯದ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಒಟ್ಟು 929 ವಿದ್ಯಾರ್ಥಿಗಳು ಗೈರಾಗಿದ್ದರು.

    ಇತಿಹಾಸ ವಿಷಯಕ್ಕೆ 15707 ವಿದ್ಯಾರ್ಥಿಗಳ ಪೈಕಿ 759 ವಿದ್ಯಾರ್ಥಿಗಳು ಗೈರಾಗಿದ್ದರು. ಭೌತಶಾಸ್ತ್ರದ 7869 ವಿದ್ಯಾರ್ಥಿಗಳಲ್ಲಿ 167 ಹಾಗೂ ಗಣಿತ ಬೇಸಿಕ್ ವಿಷಯದ 226 ವಿದ್ಯಾರ್ಥಿಗಳಲ್ಲಿ ಮೂರು ಜನ ವಿದ್ಯಾರ್ಥಿಗಳು ಗೈರಾಗಿದ್ದರು. ನಗರದ ಬಿಪಿಎಸ್‌ಸಿ ಕಾಲೇಜು ಹಾಗೂ ಸಿರಗುಪ್ಪದ ವಿಕೆಜೆ ಕಾಲೇಜಿನಲ್ಲಿ ತಲಾ ಕೇವಲ ಒಬ್ಬ, ಹೊಸಪೇಟೆಯ ಬಾಲಕಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಮೂರು, ನಗರದ ಸೇಂಟ್ ಜಾನ್ಸ್ ಪಿಯು ಕಾಲೇಜಿನಲ್ಲಿ ನಾಲ್ಕು ವಿದ್ಯಾರ್ಥಿಗಳು ಗಣಿತ ಬೇಸಿಕ್ ವಿಷಯದ ಪರೀಕ್ಷೆ ಬರೆದರು.

    1006 ಸ್ಟೂಡೆಂಟ್ಸ್ ನೋಂದಣಿ
    ಸಿರಗುಪ್ಪ: ನಗರದ ವಿಕೆಜೆ ಕಾಲೇಜಿನಲ್ಲಿ ಬುಧವಾರ ನಡೆದ ಪಿಯುಸಿ ಪರೀಕ್ಷೆಯ ಇತಿಹಾಸ ವಿಷಯಕ್ಕೆ 45, ಭೌತಶಾಸ್ತ್ರ-05 ಒಟ್ಟು 50 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ. ಇತಿಹಾಸ ವಿಷಯಕ್ಕೆ 872, ಭೌತಶಾಸ್ತ್ರ 133, ಮೂಲಗಣಿತ ವಿಷಯಕ್ಕೆ 01 ಸೇರಿ ಒಟ್ಟು 1006 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಯಿಸಿದ್ದರು. 50 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಎಂದು ವಿಕೆಜೆ ಕಾಲೇಜಿನ ಪ್ರಾಚಾರ್ಯ ಶಾಂತನಗೌಡ ತಿಳಿಸಿದ್ದಾರೆ.

    ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ, ಮೊದಲ ದಿನ 929 ವಿದ್ಯಾರ್ಥಿಗಳು ಗೈರು
    ಸಿರಗುಪ್ಪದ ವಿಕೆಜೆ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳು ತಮ್ಮ ಕೊಠಡಿ ಸಂಖ್ಯೆಯನ್ನು ಪರಿಶೀಲಿಸುತ್ತಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts