More

    ಸಮ್ಮೇಳನಾಧ್ಯಕ್ಷೆಯಾಗಿ ಗಾನವಿ ಎಸ್.ಗೌಡ ಆಯ್ಕೆ

    ಹಿರೀಸಾವೆ: ಹೋಬಳಿಯ ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಮಾ.4 ರಂದು ನಡೆಯಲಿರುವ ದ್ವಿತೀಯ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಅಧ್ಯಕ್ಷರು ಹಾಗೂ ಸಹ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು.

    ಅಧ್ಯಕ್ಷ ಹಾಗೂ ಸಹ ಅಧ್ಯಕ್ಷರ ಆಯ್ಕೆ ಸಂಬಂಧ ವಿದ್ಯಾರ್ಥಿಗಳಿಗೆ ಕವನ ವಾಚನ, ಕನ್ನಡ ಭಾಷಾ ಬೆಳವಣಿಗೆ ಕುರಿತು ವಿಷಯ ಮಂಡನೆ ಹಾಗೂ ಕನ್ನಡ ಸಾಹಿತ್ಯ ಕುರಿತಂತೆ ಪ್ರಬಂಧ ರಚನೆ ಸ್ಪರ್ಧೆ ನಡೆಸಲಾಯಿತು. ಹೋಬಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗಳಿಂದ ಒಟ್ಟು 48 ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗಾನವಿ ಎಸ್.ಗೌಡ ಪ್ರಥಮ ಸ್ಥಾನ ಪಡೆಯುವ ಮೂಲಕ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾದರು. ಹಿರೀಸಾವೆ ಎನ್‌ಎಚ್‌ಎಸ್ ಶಾಲೆಯ ಎಸ್.ಎನ್.ಶ್ರುತಿ ಹಾಗೂ ಹಿರೀಸಾವೆ ಜಿಎಚ್‌ಎಸ್ ಶಾಲೆಯ ವಿದ್ಯಾರ್ಥಿನಿ ಡಿ.ಲೀಲಾವತಿ ಸಹಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿರೀಸಾವೆ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಲೋಕೇಶ್, ಶಿಕ್ಷಣ ಸಂಯೋಜಕರಾದ ನಿತ್ಯಾನಂದ ಮತ್ತು ರವೀಂದ್ರ ಅವರು ತೀರ್ಪುಗಾರರಾಗಿ ಕರ್ತವ್ಯನಿರ್ವಹಿಸಿದರು. ಸಹಶಿಕ್ಷಕ ಪುರುಷೋತ್ತಮ್ ಸಹಕಾರ ನೀಡಿದರು.

    ಗ್ರಾಪಂ ಸದಸ್ಯ ಎಚ್.ಕೆ.ಸುಧಾಕರ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಸಮೂಹ ಸಂಪನ್ಮೂಲ ವ್ಯಕ್ತಿ ಧರ್ಮಪಾಲ್, ಶಾಲೆಯ ಮುಖ್ಯಶಿಕ್ಷಕಿ ಧನಲಕ್ಷ್ಮೀ, ಸಹಶಿಕ್ಷಕ ಪುರುಷೋತಮ್, ಅತಿಥಿ ಶಿಕ್ಷಕಿ ಅಮೃತಾ, ರಾಮೇಗೌಡ, ನಾಗೇಶ್, ಕುಮಾರ್, ಸಂತೋಷ್, ಅರುಣಕುಮಾರಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts