More

    ದ.ಕ., ಉಡುಪಿಯಲ್ಲಿ ಶೇ.20 ಸುಗ್ಗಿ ಭತ್ತ ನಾಟಿ

    ಭರತ್ ಶೆಟ್ಟಿಗಾರ್, ಮಂಗಳೂರು
    ಕರಾವಳಿಯಲ್ಲಿ ಮುಂಗಾರು ಬಳಿಕ ಎರಡನೇ ಬೆಳೆಯಾಗಿ ಸುಗ್ಗಿ ಭತ್ತ ನಾಟಿ ಕಾರ್ಯ ಆರಂಭವಾಗಿದ್ದು, ನಿಗದಿತ ಗುರಿಯ ಅಂದಾಜು ಶೇ.20ರಷ್ಟು ನಾಟಿ ಕಾರ್ಯ ನಡೆದಿದೆ. ಉಡುಪಿಯಲ್ಲಿ ನಿಗದಿತ ಗುರಿ 4000 ಹೆಕ್ಟೇರ್ ಆಗಿದ್ದರೂ, 840 ಹೆಕ್ಟೇರ್ ಜಾಗದಲ್ಲಿ ನಾಟಿಯಾಗಿದೆ. ಈ ಪೈಕಿ ಕಾರ್ಕಳದಲ್ಲಿ 830 ಮತ್ತು ಕುಂದಾಪುರದಲ್ಲಿ 10 ಹೆಕ್ಟೇರ್ ಜಾಗದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಉಡುಪಿಯಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ದ.ಕ ಜಿಲ್ಲೆಯಲ್ಲಿ 4895 ಹೆಕ್ಟೇರ್ ಗುರಿ. 930 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಮಂಗಳೂರಿನಲ್ಲಿ 433, ಬಂಟ್ವಾಳ 450, ಪುತ್ತೂರು 21 ಮತ್ತು ಸುಳ್ಯದಲ್ಲಿ 26 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ.

    ಭತ್ತದ ಜತೆಗೆ ಇತರ ಬೆಳೆಗಳಾಗಿ ಉಡುಪಿಯಲ್ಲಿ 3 ಸಾವಿರ ಹೆಕ್ಟೇರ್ ಗುರಿಯಲ್ಲಿ 964 ಉದ್ದು ಬಿತ್ತನೆಯಾಗಿದೆ. ಉಡುಪಿ 698, ಕುಂದಾಪುರ 250, ಕಾರ್ಕಳ 16 ಹೆಕ್ಟೇರ್. 9150 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 1806 ಹೆಕ್ಟೇರ್‌ನಲ್ಲಿ ಹುರುಳಿ ಬಿತ್ತನೆ ಮಾಡಲಾಗಿದೆ. ನೆಲಕಡಲೆ ಒಟ್ಟು ಗುರಿ 1,800 ಹೆಕ್ಟೇರ್‌ನಲ್ಲಿ ಬಿತ್ತನೆ. ಇನ್ನಷ್ಟೇ ಆರಂಭವಾಗಬೇಕಿದೆ. ಕೋಟ 425 ಕುಂದಾಪುರ 1,375 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಬಿತ್ತನೆ ಬೀಜ ಲಭ್ಯ: ರಬಿಗೆ ಸಂಬಂಧಿಸಿ ದ.ಕ ಜಿಲ್ಲೆಯಲ್ಲಿ ಭತ್ತ ಬಿತ್ತನೆ ಬೀಜ 286 ಕ್ವಿಂಟಾಲ್ ಬೇಡಿಕೆಯಿದ್ದು, 159.12 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಈ ಪೈಕಿ ಜಯಾ ತಳಿ 96.5 ಕ್ವಿಂಟಾಲ್ ಮತ್ತು ಜ್ಯೋತಿ 62.62 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಉಡುಪಿಯಲ್ಲಿ 184 ಕ್ವಿಂಟಾಲ್ ಬೇಡಿಕೆಯಲ್ಲಿ 134 ಕ್ವಿಂಟಾಲ್ ವಿತರಣೆಯಾಗಿದೆ. ಸಾಮಾನ್ಯ ವರ್ಗದ ರೈತರಿಗೆ 8 ರೂ. ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ನೆಲಕಡಲೆ ಬೀಜ ಬೈಂದೂರಲ್ಲಿ 120, ಕೋಟ 200, ಮತ್ತು ಕುಂದಾಪುರದಲ್ಲಿ 50 ಕ್ವಿಂಟಾಲ್ ಸಂಗ್ರಹವಿದ್ದು, ವಿತರಣೆ ಇನ್ನಷ್ಟೇ ಆರಂಭವಾಗಬೇಕಿದೆ.

    15 ದಿನದಲ್ಲಿ ಕಟಾವು ಪೂರ್ಣ: ಮುಂಗಾರು (ಖರೀಫ್) ಕಟಾವು ಅಂತಿಮ ಹಂತಕ್ಕೆ ಬಂದಿದ್ದು, ಉಡುಪಿಯಲ್ಲಿ ಶೇ.90 ಮತ್ತು ದಕ್ಷಿಣ ಕನ್ನಡದಲ್ಲಿ ಶೇ.97ರಷ್ಟು ಪೂರ್ಣಗೊಂಡಿದೆ. ದ.ಕ.ಜಿಲ್ಲೆಯಲ್ಲಿ 10,260 ಹೆಕ್ಟೇರ್ ಗುರಿ ಮೀರಿ 11,247 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದ್ದು, 10,876 ಹೆಕ್ಟೇರ್‌ನಲ್ಲಿ ಕಟಾವು ಪೂರ್ಣಗೊಂಡಿದೆ. ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಶೇ.100 ಮುಗಿದಿದೆ. ಮಂಗಳೂರಿನಲ್ಲಿ ಶೇ.97, ಬಂಟ್ವಾಳ, ಪುತ್ತೂರಿನಲ್ಲಿ ಶೇ.95ರಷ್ಟು ಪೂರ್ಣಗೊಂಡಿದೆ. ತಡವಾಗಿ ನಾಟಿ ಮಾಡಿದ ಕಡೆಗಳಲ್ಲಿ ಮಾತ್ರ ಕಟಾವು ಬಾಕಿ ಉಳಿದಿದ್ದು, ಇನ್ನು 10-15 ದಿನದಲ್ಲಿ ಶೇ.100ರಷ್ಟು ಮುಗಿಯಲಿದೆ.

    ಕರಾವಳಿ ಮಳೆ ಆಶ್ರಿತ ಪ್ರದೇಶ ಆಗಿರುವುದರಿಂದ ನೀರಾವರಿ ಸೌಲಭ್ಯ ಇರುವಲ್ಲಿ ಮಾತ್ರ ಎರಡನೇ ಭತ್ತ ಬೆಳೆ ತೆಗೆಯುತ್ತಾರೆ. ಮುಖ್ಯವಾಗಿ ಕಿಂಡಿ ಅಣೆಕಟ್ಟು, ಕೆರೆಗಳು ಸುಗ್ಗಿ ಬೆಳೆಗೆ ಹೆಚ್ಚು ಪೂರಕ. ಉಳಿದಂತೆ ದ್ವಿದಳ ಧಾನ್ಯಗಳನ್ನೂ ಭತ್ತದ ಬದಲಿಗೆ ಬೆಳೆಯ ಲಾಗುತ್ತದೆ.
    -ಡಾ.ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts