More

    ಕೋಡಿ ಲೈಟ್ ಹೌಸ್ ಬಳಿ ನೂರು ಕಡಲಾಮೆ ಮೊಟ್ಟೆ ರಕ್ಷಣೆ

    ಕುಂದಾಪುರ: ಕೋಡಿ ಲೈಟ್ ಹೌಸ್ ಬಳಿ ಶುಕ್ರವಾರ 100 ಕಡಲಾಮೆ ಮೊಟ್ಟೆಗಳನ್ನು ಸ್ಥಳೀಯ ಯುವಕರು, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಎಸ್‌ಎಫ್‌ಎಲ್ ಸದಸ್ಯರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
    ಕೋಡಿ ಬಾಬು ಮೊಗವೀರ ಮತ್ತು ಗಣಪತಿ ಖಾರ್ವಿ ಎಂಬುವರು ಕಡಲಾಮೆ ಮೊಟ್ಟೆ ನೋಡಿದ ಬಳಿಕ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಗೆ ಮಾಹಿತಿ ನೀಡಿದ್ದರು. ಸಂಘಟನೆ ಸಂಯೋಜಕ ದಿನೇಶ್ ಸಾರಂಗ, ವೆಂಕಟೇಶ್ ಶೇರುಗಾರ್, ಸಂದೀಪ್ ಕೋಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಭರತ್, ಉದಯ ಖಾರ್ವಿ, ಅನಿಲ್ ಖಾರ್ವಿ, ದಿನೇಶ್ ಕೋಡಿ ಮೊಟ್ಟೆಗಳನ್ನು ರಕ್ಷಿಸಿದ್ದಾರೆ.

    ಕುಂದಾಪುರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಹಸ್ತಾ ಶೆಟ್ಟಿ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಕಡಲ ತೀರದಲ್ಲಿಯೇ ಮೊಟ್ಟೆಗಳ ಸಂರಕ್ಷಣೆಗಾಗಿ ಹ್ಯಾಚರಿ ನಿರ್ಮಿಸಿದ್ದಾರೆ.
    ಅಪರೂಪದ ಆಲಿವ್ ರಿಡ್ಲೇ ಜಾತಿಗೆ ಸೇರಿದ ಕಡಲಾಮೆಗಳ 24 ಗಂಟೆ ಹ್ಯಾಚರಿ ವೀಕ್ಷಣೆ ನಡೆಸಲಾಗುತ್ತದೆ. ಹ್ಯಾಚರಿ ಅಥವಾ ಮೊಟ್ಟೆಗಳಿಗೆ ಹಾನಿಯುಂಟು ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮರಿಗಳು ಹೊರ ಬಂದು ಸುರಕ್ಷಿತವಾಗಿ ಕಡಲು ಸೇರುವವರೆಗೂ ಅರಣ್ಯ ಇಲಾಖೆಯ ಸಮನ್ವಯದೊಂದಿಗೆ ನಮ್ಮ ಸಂಘಟನೆಯ ಸದಸ್ಯರು ಕೆಲಸ ಮಾಡಲಿದ್ದಾರೆ ಎಂದು ಎಸ್‌ಎಫ್‌ಎಲ್ ಸಂಸ್ಥೆ ಸದಸ್ಯರು ತಿಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts