More

    ಕಡಲ ಒಡಲು ಸೇರಿದ ಮರಿ ಕೂರ್ಮ ಪಡೆ

    ಕಾರವಾರ: ಹೊನ್ನಾವರ ತಾಲೂಕಿನ‌ ಕಾಸರಕೋಡು ಟೊಂಕ ಕಡಲ ತೀರದಲ್ಲಿ ಸಂರಕ್ಷಿಸಲಾದ ಕಡಲ ಆಮೆಯ ಮೊಟ್ಟೆಗಳು ಮರಿಯಾಗಿವೆ.

    ಭಾರತೀಯ ಕೋಷ್ಟ್ ಗಾರ್ಡ್ ಪಡೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಅವುಗಳನ್ನು ಕಡಲಿಗೆ ಬಿಡುವ ಕಾರ್ಯ ಭಾನುವಾರ ನಡೆಯಿತು.

    ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಕಮಾಂಡೆಂಟ್ ಶರತ್ ಜೋಶಿ ನೇತೃತ್ವದಲ್ಲಿ ಇಲ್ಲಿನ ಕಾಸರಕೋಡ ಟೊಂಕದ ಕಡಲತೀರದಲ್ಲಿ ಇಂದು ಕಡಲ ಆಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸಲಾಯಿತು.

    ಇದನ್ನೂ ಓದಿ: ಕಗ್ಗಂಟಾದ ಸಿಎಂ ಆಯ್ಕೆ: ಡಿ.ಕೆ.ಶಿವಕುಮಾರ್​ ಹೋರಾಟಕ್ಕೀಗ ಸಹೋದರ ನೇರ ಎಂಟ್ರಿ!

    45ಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು 4000ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಲ್ಲಿನ ಕಾಸರಕೋಡ ಟೊಂಕದ ಕಡಲತೀರದಲ್ಲಿ ಇಟ್ಟಿರುವದು ಮತ್ತು ಅವುಗಳನ್ನು ಅರಣ್ಯ ಇಲಾಖೆ ಸ್ಥಳೀಯ ಮೀನುಗಾರರ ನೆರವಿನಿಂದ  ಸಂರಕ್ಷಣೆ ಮಾಡಿ ಮರಿಗಳಾದ ನಂತರ ಸ್ಥಳಿಯರು ಅವುಗಳಿಗೆ ಪೂಜೆ ಸಲ್ಲಿಸಿ ಆಗಾಗ್ಗೆ ಸಮುದ್ರಕ್ಕೆ ಸೇರಿಸುವ ಕಾರ್ಯ ನಿರಂತರವಾಗಿ ನಡೆದು ಬಂದಿದೆ.

    ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಪಿಎಸ್ ಐ ಅಶೋಕ ಸಿ.ಎಂ.  ಕೊಂಕಣ ಖಾರ್ವಿ ಸಮಾಜದ ಸ್ಥಳೀಯ ವಾಡೆಯ ಪ್ರಮುಖ ರಾಜೇಶ ತಾಂಡೇಲ, ರಾಜು ತಾಂಡೆಲ, ರಾಜೇಶ್ ತಾಂಡೇಲ್, ಸುನಿತಾ ತಾಂಡೇಲ್, ಪಾರ್ವತಿ ತಾಂಡೇಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts