More

    ಮದರಸಾ ಕೇಂದ್ರಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬೇಡ; ಎಸ್‌ಡಿಪಿಐ ಆಗ್ರಹ

    ದಾವಣಗೆರೆ: ಮದರಸಾ ಕೇಂದ್ರಗಳಲ್ಲಿ ನೈತಿಕ ಶಿಕ್ಷಣ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಅನಗತ್ಯ ಮೂಗು ತೂರಿಸುವ ಕೆಲಸ ಮಾಡುತ್ತಿದ್ದು, ಇದು ಸರಿಯಲ್ಲ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆಕ್ಷೇಪಿಸಿದೆ.

    ಮದರಸಾ ಶಿಕ್ಷಣ ಕೇಂದ್ರಗಳಿಗೆ 1400 ವರ್ಷಗಳ ಇತಿಹಾಸವಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುವ ಕೇಂದ್ರಗಳಾಗಿವೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಬೆಡ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ರಾಜ್ಯದಲ್ಲಿ 996 ನೋಂದಣಿ ಆಗಿರುವ ಮರಸಾಗಳ ಕೇಂದ್ರಗಳಿವೆ. ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ. ಸ್ವಂತ ಹಣದಲ್ಲಿ, ದಾನಿಗಳ ನೆರವಿನಲ್ಲಿ ಮುನ್ನಡೆಯುತ್ತಿವೆ. ಮದರಸಾಗಳ ಟಾರ್ಗೆಟ್‌ಗೆ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

    ರಾಜ್ಯ ಬಿಜೆಪಿ ಸರ್ಕಾರ ನಾನಾ ಹಗರಣಗಳಲ್ಲಿ ಭಾಗಿಯಾಗಿದೆ. ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಸರ್ಕಾರವನ್ನು ರಾಷ್ಟ್ರಪತಿ ಅವರು ವಜಾಗೊಳಿಸಬೇಕು ಮತ್ತು ಹಗರಣಗಳ ತನಿಖೆಗೆ ಕೇಂದ್ರ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್ ಅಲ್ಲ; 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ. ಅಧಿಕೃತ ಗುತ್ತಿಗೆದಾರರೇ ನೇರವಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪಿಎಸ್‌ಐ ನೇಮಕಾತಿ, ಕೆಪಿಟಿಸಿಎಲ್ ನೇಮಕಾತಿ, ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ. ಹೀಗೆ ಭ್ರಷ್ಟಾಚಾರಗಳ ಸರಮಾಲೆಯೇ ರಾಜ್ಯ ಸರ್ಕಾರದ ಕೊರಳಲ್ಲಿದೆ ಎಂದು ಆರೋಪಿಸಿದರು.

    ಗುತ್ತಿಗೆದಾರರ ಆರೋಪದಲ್ಲಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಇವರಂತೆ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಗೃಹ ಸಚಿವರು, ಶಿಕ್ಷಣ ಇಲಾಖೆ ಹಗರಣದಲ್ಲಿ ಸಚಿವ ನಾಗೇಶ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಆಡಳಿತ, ವಿರೋಧ ಪಕ್ಷದ ಯಾವ ಸಂಸದ, ಶಾಸಕರು ಮಾತ್ರವಲ್ಲ ಐಎಎಸ್, ಐಪಿಎಸ್ ಯಾವುದೇ ಉನ್ನತ ಹುದ್ದೆ ಅಧಿಕಾರಿಗಳು ಇಂದಿಗೂ ಆಸ್ತಿ ಘೋಷಣೆ ಮಾಡಿಕೊಂಡಿಲ್ಲ. ಇನ್ನು ಪ್ರತಿಪಕ್ಷ ಕಾಂಗ್ರೆಸ್ 100 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಜನ್ಮದಿನೋತ್ಸವ, ಮೊಟ್ಟೆ ರಾಜಕೀಯ ಮಾಡುತ್ತಿದೆಯೇ ಹೊರತು ನೈತಿಕ ಹೋರಾಟದ ಹಾದಿ ತುಳಿದಿಲ್ಲ, ಅಸಹಾಯಕವಾಗಿದೆ ಎಂದು ದೂರಿದರು.

    ಸರ್ಕಾರಿ, ಆಸ್ಪತ್ರೆ, ಮೆಡಿಕಲ್ ಕಾಲೇಜ್ ನೀಡಲಿ
    ದಾವಣಗೆರೆ ತಾಲೂಕು ದಕ್ಷಿಣ ಭಾಗಕ್ಕೆ ಸರ್ಕಾರ ಒಂದು ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಕಾಲೇಜ್ ಮಂಜೂರು ಮಾಡಬೇಕು. ಹೆಗಡೆ ನಗರ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
    ಎಸ್‌ಡಿಪಿಐ ಕಣಕ್ಕೆ
    ಬರುವ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ ರಾಜ್ಯದ 100 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿದೆ. ಸರ್ಕಾರ ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts