More

    ಎಸ್‌ಡಿಎಂನಲ್ಲಿ ವಿಶ್ವ ಸ್ವರೂಪ ಶಸಚಿಕಿತ್ಸಾ ದಿನ

    ಧಾರವಾಡ: ನಗರದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಸ್ವರೂಪ ಶಸಚಿಕಿತ್ಸಾ ವಿಭಾಗದಿಂದ ವಿಶ್ವ ಸ್ವರೂಪ ಶಸಚಿಕಿತ್ಸಾ ದಿನವನ್ನು ಶನಿವಾರ ಆಚರಿಸಲಾಯಿತು. ಉಪ ಕುಲಪತಿ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಕಾರ್ಯಕ್ರಮ ಉದ್ಘಾಟಿಸಿದರು.
    ಸ್ವರೂಪ ಶಸ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಅನಿಲ ಆರ್. ಅವರು ರೋಗಿಗಳಿಗೆ ದೊರಕುವ ವೈದ್ಯಕೀಯ ಸೇವೆಗಳ ಬಗ್ಗೆ ಉಪನ್ಯಾಸ ನೀಡಿದರು. ಆಪಘಾತ ಗಾಯಗಳು, ಸುಟ್ಟ ಗಾಯಗಳು, ನರದ ಗಾಯಗಳು, ಕಾಂತಿವರ್ಧಕ ಚಿಕಿತ್ಸೆ, ಕ್ಯಾನ್ಸರ್ ರೋಗದ ಚಿಕಿತ್ಸೆ ಮತ್ತು ಪುನರ್ನಿರ್ಮಾಣ ಸೇವೆ ಲಭ್ಯ ಎಂದರು.
    ಎಸ್.ಡಿ.ಎಂ. ವಿಶ್ವವಿದ್ಯಾಲಯದ ಸಹ ಉಪ ಕುಲಪತಿ ಡಾ. ಎಸ್.ಕೆ. ಜೋಶಿ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ, ಪೆಥಾಲಾಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಯು.ಎಸ್. ದಿನೇಶ ಮತ್ತು ಸ್ವರೂಪ ಶಸಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಅವಿನಾಶ ಪ್ರಭು ಹಾಗೂ 150ಕ್ಕೂ ಹೆಚ್ಚು ವೈದ್ಯರು, ಸಹಾಯಕ ಸಿಬ್ಬಂದಿ, ಶುಶ್ರೂಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts