More

    ಸ್ಕೂಬಾ ಡೈವಿಂಗ್ ಉತ್ಸವಕ್ಕೆ ಚಾಲನೆ

    ಭಟ್ಕಳ: ಭೂಮಿಯ ಮೇಲೆ ಒಂದು ಲೋಕವಿದ್ದರೆ ನೀರಿನಲ್ಲಿ ಇನ್ನೊಂದು ಲೋಕವಿದೆ. ಕಣ್ಣು ಕುಕ್ಕುವ, ಮನಸೂರೆಗೊಳ್ಳುವ ಜಲಚರಗಳನ್ನು ನೋಡುವುದೇ ಅದ್ಭುತ ಅನುಭವ. ಇದು ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿರುವುದು ಭಾಗ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಹೇಳಿದರು. ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡ ಸ್ಕೂಬಾ ಡೈವಿಂಗ್ ಉತ್ಸವದಲ್ಲಿ ಮಾತನಾಡಿದರು. ಅಂಡಮಾನ್ ಬಿಟ್ಟರೆ ದೇಶದ ಕೌತುಕ ಇರುವುದು ನಮ್ಮ ಜಿಲ್ಲೆಯಲ್ಲಿ. ಲಕ್ಷಾಂತರ ರೂಪಾಯಿ ವ್ಯಯಿಸಿ ಅಲ್ಲಿಗೆ ಹೋಗುವುದಕ್ಕಿಂತ ಇಲ್ಲೇ ಸ್ಕೂಬಾ ಡೈವ್ ಅನುಭವ ಪಡೆಯಬಹುದು. ಮುರ್ಡೇಶ್ವರದ ಸ್ಕೂಬಾ ಡೈವ್ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದ್ದು ನುರಿತ ಡೈವರ್ಸ್‌ಗಳು ಡೈವ್ ಮಾಡಲು ಸಮುದ್ರದಾಳದಲ್ಲಿ ಕರೆದೊಯ್ಯುತ್ತಾರೆ. ಪ್ರಚಾರದ ಕೊರತೆಯಿಂದ ಅಷ್ಟೊಂದು ಪ್ರಾಮುಖ್ಯತೆ ಪಡೆದಿಲ್ಲ. ಇಂಥ ಉತ್ಸವಗಳನ್ನು ಏರ್ಪಡಿಸಿ ಪ್ರವಾಸಿಗರಿಗೆ ಮಾಹಿತಿ ನೀಡಲಾಗುತ್ತದೆ ಎಂದರು. ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಉಪವಿಭಾಗಾಧಿಕಾರಿ ಸಾಜೀದ್ ಮುಲ್ಲಾ ತಹಸೀಲ್ದಾರ ವಿ.ಪಿ ಕೊಟ್ರಳ್ಳಿ, ಕಾರವಾರ ಡಿಎಫ್‌ಒ ವಸಂತ ರೆಡ್ಡಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು. ಸಭಾ ಕಾರ್ಯಕ್ರಮದ ನಂತರ ಮೂರು ದೋಣಿಗಳಲ್ಲಿ 50ಕ್ಕೂ ಹೆಚ್ಚು ಮಂದಿ ನೇತ್ರಾಣಿ ಗುಡ್ಡಕ್ಕೆ ಪ್ರಯಾಣ ಬೆಳೆಸಿದರು. ಕುಮಟಾದ 12ರ ಬಾಲೆ ಋತು ಶ್ರೀಧರ ಕುಮಟಾಕರ ಸತತ ಒಂದು ಗಂಟೆ ಸ್ಕೂಬಾ ಡೈವ್ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

    ಪ್ರಪಂಚದಲ್ಲಿ ಕೆಲವೆಡೆ ಮಾತ್ರ ಲಭ್ಯವಿರುವ ಸ್ಕೂಬಾ ಡೈವಿಂಗ್ ಮುರ್ಡೇಶ್ವರದಲ್ಲೂ ಇದೆ ಎಂಬುದು ಕೆಲವು ವರ್ಷದ ಹಿಂದೆ ನನಗೆ ನೇಪಾಳ ಪ್ರವಾಸಕ್ಕೆ ಹೋದಾಗ ತಿಳಿಯಿತು. ನಿರೀಕ್ಷಿತ ಮಟ್ಟದಲ್ಲಿ ಸ್ಕೂಬಾ ಡೈವಿಂಗ್ ಯಶಸ್ಸು ಕಾಣದಿರಲು ಪ್ರಚಾರದ ಕೊರತೆಯೇ ಕಾರಣ. ಜಿಲ್ಲೆ ಹಾಗೂ ಹೊರಜಿಲ್ಲೆಗಳ ಜನರಿಗೆ ಇದರ ಬಗ್ಗೆ ತಿಳಿಸುವ ಕೆಲಸವಾಗಬೇಕು. ಸುರಕ್ಷತೆಯ ದೃಷ್ಟಿಕೋನದಿಂದಲೂ ಪ್ರವಾಸಿಗರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕು.
    -ಸುನೀಲ ನಾಯ್ಕ, ಭಟ್ಕಳ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts