More

    ಅಶೋಕ ಸಿದ್ದಾಪುರ ಶಾಲೆಯಲ್ಲಿ ವಲಯಮಟ್ಟದ ಕ್ರೀಡಾಕೂಟ

    ಮೊಳಕಾಲ್ಮೂರು: ಆರೋಗ್ಯ ಹಾಗೂ ಜೀವನದಲ್ಲಿ ಉತ್ಸಾಹಕ್ಕೆ ಕ್ರೀಡೆಗಳು ಹೆಚ್ಚು ಪರಿಣಾಮಕಾರಿ ಆಗಿವೆ ಎಂದು ವಕೀಲ ರಾಜಶೇಖರ ನಾಯಕ ತಿಳಿಸಿದರು.

    ತಾಲೂಕಿನ ಅಶೋಕ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕ್ರೀಡೆ ಮಕ್ಕಳ ಭವಿಷ್ಯದ ಅವಿಭಾಜ್ಯ ಅಂಗ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಜಾಗತೀಕರಣ ವ್ಯವಸ್ಥೆಯಲ್ಲಿ ಗ್ರಾಮೀಣ ಕ್ರೀಡೆಗಳು ದೂರವಾಗಿ, ಟಿವಿ. ಮೊಬೈಲ್ ಹಾವಳಿ ಹೆಚ್ಚಾಗಿದೆ ಎಂದು ಬೇಸರಿಸಿದರು.

    ಇದರಿಂದ ಬೆಳೆಯುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪಾಲಕರು, ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಆದ್ಯತೆ ನೀಡಬೇಕು ಎಂದರು.

    ಬಿಇಒ ಜಯಲಕ್ಷ್ಮೀ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಮತ್ತು ಕ್ರೀಡೆ ಬಹಳ ಅಗತ್ಯ ಎಂದು ಹೇಳಿದರು.

    ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಈರಣ್ಣ, ಬಿಆರ್‌ಸಿ ತಿಪ್ಪೇಸ್ವಾಮಿ, ಗ್ರಾಪಂ ಮಾಜಿ ಅದ್ಯಕ್ಷೆ ಹಂಪಮ್ಮ, ಮುಖ್ಯಶಿಕ್ಷಕಿ ಜಯಲಕ್ಷ್ಮೀ, ಕೆ.ಎಚ್.ಸಣ್ಣಯಲ್ಲಪ್ಪ, ಕರಿಬಸಪ್ಪ, ಇಸಿಒ ಓಂಕಾರಪ್ಪ, ಗ್ರಾಪಂ ಸದಸ್ಯರಾದ ಗಂಗಾಧರ, ತಿಪ್ಪೇಸ್ವಾಮಿ, ಪಿಡಿಒ ಮಾರಣ್ಣ ಇದ್ದರು.
    ಕ್ರೀಡಾಕೂಟದಲ್ಲಿ 15 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts