More

    ಕಡ್ಲೆಗುದ್ದು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ: ಸಾಧನೆ ಪ್ರತಿಭಾವಂತರ ಸ್ವತ್ತು ಎಂದ ಭುವನೇಶ್ವರಿ ಕರುಣ್

    ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ವಿದ್ಯಾರ್ಥಿಗಳ ಪ್ರತಿಭೆಯನ್ನು ಸಾಣೆ ಹಿಡಿದಾಗ ಮಾತ್ರ ಸಾಧಕರಾಗಲು ಸಾಧ್ಯ. ಸಾಧನೆ ಪ್ರತಿಭಾವಂತರ ಸ್ವತ್ತು ಹೊರತು, ಸೋಮಾರಿಗಳದ್ದಲ್ಲ ಎಂದು ವಿಷ್ಣು ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಭುವನೇಶ್ವರಿ ಕರುಣ್ ಅಭಿಪ್ರಾಯಪಟ್ಟರು.

    ಕಡ್ಲೆಗುದ್ದು ಗ್ರಾಮದ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನವ ವರ್ಷದ ಹೊಸ್ತಿಲಲ್ಲಿ ಸಾಧಕರೊಂದಿಗೆ ಸಂವಾದ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಧಕರನ್ನು ಗೌರವಿಸಿದರೆ ಇತರರಿಗೂ ಪ್ರೇರಣೆಯಾಗಲಿದೆ ಎಂದರು.

    ಡಾ.ಮಹೇಶ್ ಮಾತನಾಡಿ, ಕರೊನಾ ಸಂಕಷ್ಟದ ಕಾಲದಲ್ಲಿ ಪರಿಶ್ರಮ, ಶ್ರದ್ಧೆ, ಆಸಕ್ತಿಯಿಂದ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

    ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶಾಲೆಯ ವಿದ್ಯಾರ್ಥಿನಿಯರಾದ ಸುಚಿತ್ರಾ, ದೀಕ್ಷಿತಾ, ಸೃಷ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಶಿಕ್ಷಕರಾದ ನಟರಾಜ್, ಮಂಜಪ್ಪ, ಕರಿಬಸಪ್ಪ, ಮಹಾಂತೇಶ್, ಪ್ರಶಿಕ್ಷಣಾರ್ಥಿ ಮೇಘನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts