More

    ಶಾಲೆ ಗುಣಮಟ್ಟ ಕಾಯ್ದುಕೊಳ್ಳುವುದು ಅವಶ್ಯ

    ಚನ್ನಮ್ಮನ ಕಿತ್ತೂರು: ಕನ್ನಡ ಉಳಿವಿಗಾಗಿ ಸರ್ಕಾರಿ ಕನ್ನಡ ಶಾಲೆಗಳ ಗುಣಮಟ್ಟ ಕಾಯ್ದುಕೊಳ್ಳುವುದು ಅವಶ್ಯ ಎಂದು ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ವೀರಭದ್ರ ಅಂಗಡಿ ಹೇಳಿದರು.

    ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದರು. ಕಿತ್ತೂರಿನ ಪ್ರಣವ ಯೋಗ ಕೇಂದ್ರದ ಸಂಚಾಲಕಿ ಸೌಮ್ಯಾ ರಾಘವೇಂದ್ರ ಮಾತನಾಡಿ, ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಗಲು ಹಲವಾರು ಜನರು ಶ್ರಮಿಸಿದ್ದಾರೆ. ಕನ್ನಡ, ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಸಾನ್ನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

    ಕಸಾಪ ತಾಲೂಕಾಧ್ಯಕ್ಷ ಡಾ.ಎಸ್.ಬಿ.ದಳವಾಯಿ, ಗೌರವ ಕಾರ್ಯದರ್ಶಿ ಮಂಜುನಾಥ ಕಳಸಣ್ಣವರ, ಪತ್ರಕರ್ತ ಪ್ರದೀಪ ಮೇಲಿನಮನಿ ಮಾತನಾಡಿದರು. ಡಿಸೆಂಬರ್ ತಿಂಗಳ ಸಾಹಿತಿ ಸನ್ಮಾನದ ಅಂಗವಾಗಿ ಯುವ ಸಾಹಿತಿ ಮತ್ತು ಬೆಳಗಾವಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾಗಯ್ಯ ಹುಲೆಪ್ಪನವರಮಠ ಅವರನ್ನು ಗೌರವಿಸಲಾಯಿತು.

    ಕೃತಿ ರಾಘವೇಂದ್ರ ಅವರ ಕನ್ನಡ ಗೀತೆಯೊಂದಿಗೆ ಆರಂಭವಾದ ಕವಿಗೋಷ್ಠಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಕವಿ, ಕವಯಿತ್ರಿಯರು ಕವನ ವಾಚನ ಮಾಡಿದರು. ಇವರೆಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ವಿತರಿಸಲಾಯಿತು. ಶಿಕ್ಷಕಿ ಸುನಂದಾ ಪಾಟೀಲ, ಕೋಶಾಧ್ಯಕ್ಷ ಮಹೇಶ್ವರ ಹೊಂಗಲ,ಕಾರ್ಯದರ್ಶಿ ವಿ.ಎಸ್.ನಂದಿಹಳ್ಳಿ, ಪ್ರಭಾ ಲದ್ದಿಮಠ, ಶೋಭಾ ಪಾಶ್ಚಾಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts