More

    ಪೌರತ್ವ ತರಬೇತಿಯಿಂದ ಮತದಾನ ಜಾಗೃತಿ

    ಧಾರವಾಡ: ಶಾಲಾ ಹಂತದಲ್ಲಿ ನಾಗರಿಕ ಪೌರತ್ವ ತರಬೇತಿ ನೀಡಲು ಪ್ರತಿ ಶಾಲೆಗಳಲ್ಲಿ ಅಣಕು ಸಂಸತ್ತು ರಚಿಸಲಾಗುತ್ತದೆ. ಇದು ಮತದಾನ ಜಾಗೃತಿ ಆಂದೋಲನದ ಒಂದು ಭಾಗ ಎಂದು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹೇಳಿದರು.
    ನಗರದ ಕೆಎಲ್‌ಇ ಸಂಸ್ಥೆಯ ಆರ್‌ಎಲ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಸಂಸತ್ತು ಹಾಗೂ ಸಾಂಸ್ಕೃತಿಕ ಸಂಗಳ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
    ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಡಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಸಂಸತ್ತಿನ ಅಡಿ ಜರುಗುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ವಿದ್ಯಾರ್ಥಿ ಜೀವನದಲ್ಲೇ ನಾಗರಿಕತ್ವದ ತರಬೇತಿ ಲಭಿಸುತ್ತದೆ ಎಂದರು.
    ಕಾಲೇಜು ಪ್ರಾಚಾರ್ಯ ಸಿ.ವಿ. ಕನಬರ್ಗಿ ಮಾತನಾಡಿ, ಯುವಕರು ಕಡ್ಡಾಯವಾಗಿ ಸಂಸತ್ತಿನ ಬಗ್ಗೆ ಜ್ಞಾನ ಮತ್ತು ಅರಿವು ಹೊಂದಬೇಕು ಎಂದರು.
    ಉಪ ಪ್ರಾಚಾರ್ಯ ವಿ.ಪಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುನಾವಣಾ ಸಾಕ್ಷರತಾ ಕ್ಲಬ್‌ನ ನೋಡಲ್ ಅಧಿಕಾರಿ ಎಂ.ಆರ್. ಹಿರೇಮಠ ಅವರು ಸಂಸತ್ತಿನ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ಸಂಸತ್ತಿನ ಮುಖ್ಯಸ್ಥ ಐ.ಸಿ. ನೇಕಾರ ವರದಿ ವಾಚಿಸಿದರು. ಎಂ.ಜಿ. ದೇವಜಿ, ಪಿ.ಪಿ. ಹಿರೇಮನಿ, ಆರ್.ಬಿ. ಬಾನಪ್ಪನವರ, ಸಿ.ಬಿ. ಅಂಗಡಿ, ಎ.ಜಡ್. ಸರಕಾಜಿ, ಎಸ್.ಎಸ್. ಜಂಬಿಗಿ, ಇತರರಿದ್ದರು.
    ಎಂ.ಎಂ. ಬಿರಾದಾರ ನಿರ್ವಹಿಸಿದರು. ಎಸ್.ಎ. ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts