More

    ಸಮಾಜದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ

    ಶಾಲಾ ವಾರ್ಷಿಕೊತ್ಸವದಲ್ಲಿ ಚಲನಚಿತ್ರ ಹಿರಿಯ ನಟಿ ಗಿರಿಜಾ ಲೋಕೇಶ್ ಅಭಿಪ್ರಾಯ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ಶಿಕ್ಷಣ ಎಂಬುದು ಅತ್ಯಂತ ಅಮೂಲ್ಯ ಸಂಪತ್ತಾಗಿದ್ದು, ಒಮ್ಮೆ ಗಳಿಸಿದರೇ ಜೀವನದ ಅಂತ್ಯದವರೆಗೂ ಜತೆಯಲ್ಲಿರುತ್ತದೆ ಎಂದು ಚಲನಚಿತ್ರ ಹಿರಿಯ ನಟಿ ಗಿರಿಜಾಲೋಕೇಶ್ ಹೇಳಿದರು.
    ಬೆಂಗಳೂರು ಉತ್ತರ ತಾಲೂಕಿನ ನಂದರಾಮಯ್ಯಪಾಳ್ಯದ ಬ್ಲೂಮೂನ್ ಪಬ್ಲಿಕ್ ಶಾಲೆಯಲ್ಲಿ ಬಿಎಂಎಸ್ ದಶಮಾನೋತ್ಸವ ಶಿರ್ಷಿಕೆಯಡಿ ಆಯೋಜಿಸಿದ್ದ ಶಾಲಾ ವಾರ್ಷಿಕೊತ್ಸವದಲ್ಲಿ ಮಾತನಾಡಿದರು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರೀಕ್ಷೆಗಳು ಬಂದಾಗ ಶಾಲಾ ವಾರ್ಷಿಕೋತ್ಸವ ಮಾಡುವುದು ರೂಢಿ. ಕೆಲ ದಶಕಗಳ ಹಿಂದೆ ವಾರ್ಷಿಕೋತ್ಸವದ ಬದಲಿಗೆ ಸರಸ್ವತಿ ಪೂಜೆ ಮಾಡಲಾಗುತ್ತಿತ್ತು. ಉತ್ತಮ ಶಾಲೆ ಆಯ್ಕೆ ಮಾಡಿ, ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಪ್ರಸ್ತುತ ಸಮಾಜದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಆದ್ದರಿಂದ ವಿದ್ಯಾರ್ಥಿಗಳಿಗೂ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳತ್ತ ಗಮನ ಹರಿಸಬೇಕಿದೆ ಎಂದರು.
    ಸಿಗಂದೂರು ಚೌಡೇಶ್ವರಿ ದೇವಾಲಯದ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೊತ್ಸಾಹಿಸಿದಲ್ಲಿ ವಿಶ್ವಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ. ಶಾಲಾ ಕಾರ್ಯಕ್ರಮಗಳಲ್ಲಿ ವೀರಯೋಧರನ್ನು ಸನ್ಮಾನಿಸಿ ಗೌರವಿಸುವ ಸಂಸ್ಕೃತಿಯನ್ನು ಹುಟ್ಟಹಾಕಿರುವ ಶಾಲಾ ಆಡಳಿತ ಮಂಡಳಿ ಕಾರ್ಯ ಪ್ರಶಂಸನೀಯ ಎಂದರು.
    ಗ್ರಾಪಂ ಸದಸ್ಯ ಯಶೋಧಾ, ಗೋವಿಂದರಾಜು, ದೀಪಿಕಾ, ನರೇಂದ್ರಬಾಬು, ಸಹಶಿಕ್ಷಕಿ ಕೋಕಿಲಾ, ರತ್ನಮ್ಮ, ರಮ್ಯಾ, ಪವಿತ್ರಾ, ರೂಪಾ, ವಸಂತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts