More

    ಭೂ ದಾಖಲೆಗಳ ಶಾಶ್ವತ ಗಣಕೀಕರಣಕ್ಕೆ ಯೋಜನೆ

    ಪಾಂಡವಪುರ : ಕಾಗದದ ಹಳೆಯ ದಾಖಲೆಗಳನ್ನು ಸುಸ್ಥಿತಿಯಲ್ಲಿಡುವುದು ಮತ್ತು ಕಳ್ಳತನವಾಗದಂತೆ ತಡೆಯುವ ಉದ್ದೇಶದಿಂದ ಭೂ ದಾಖಲೆಗಳ ಶಾಶ್ವತ ಗಣಕೀಕರಣ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

    ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಎಲ್ಲ ಕಂದಾಯ ಇಲಾಖೆಗಳಲ್ಲಿನ ದಾಖಲೆಗಳನ್ನು ಗಣಕೀಕರಣ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದೆ. ಪ್ರತಿ ಜಿಲ್ಲೆಯಿಂದ ಒಂದು ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇದರ ಭಾಗವಾಗಿ ಮಂಡ್ಯ ಜಿಲ್ಲೆಯಲ್ಲಿ ಪಾಂಡವಪುರ ತಾಲೂಕು ಆಯ್ಕೆಯಾಗಿದ್ದು, ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ ಯೋಜನೆಯ ಭಾಗವಾಗಿದೆ ಎಂದು ತಿಳಿಸಿದರು.

    ಯೋಜನೆ ಫೆ.1ರಿಂದ ಆರಂಭವಾಗಿದ್ದು, ಯೋಜನೆ ಅನುಷ್ಠಾನಕ್ಕೆ 10 ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನಿಯೋಜಿಸಲಾಗಿದ್ದು, 8 ಕಂಪ್ಯೂಟರ್, 2 ಓವರ್ ಹೆಡ್ ಸ್ಕ್ಯಾನರ್ ಮತ್ತು 2 ಡ್ಯೂಫ್ಲೆಕ್ಸ್ ಸ್ಕ್ಯಾನರ್‌ಗಳನ್ನು ನೀಡಲಾಗಿದೆ. ತಾಲೂಕಿನಲ್ಲಿ 4 ಹೋಬಳಿ ಹಾಗೂ 139 ಗ್ರಾಮಗಳಿದ್ದು, ಪ್ರಮುಖ ಕಡತ ಹಾಗೂ ವಹಿಗಳಿರುತ್ತವೆ. ಪ್ರತಿ ತಿಂಗಳು ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಗೆ 250ಕ್ಕಿಂತ ಹೆಚ್ಚು ನಕಲು ದಾಖಲೆ ಕೋರಿ ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಇದರ ನಿರ್ವಹಣೆಗೆ ಅನುಕೂಲವಾಗುತ್ತದೆ. ಈ ಯೋಜನೆಯಿಂದ ಯಾವ್ಯಾವ ಅಧಿಕಾರಿಗಳ ಬಳಿ ಕಡತ ಎಷ್ಟು ದಿನ ಉಳಿದುಕೊಂಡಿದೆ ಎಂಬುದು ತಿಳಿಯಲಿದೆ. ಜತೆಗೆ ಆನ್‌ಲೈನ್ ಮೂಲಕವೇ ವಿಲೇವಾರಿ ಆಗುವುದರಿಂದ ದಾಖಲೆ ಪಡೆಯಲು ವಿಳಂಬವಾಗುವುದಿಲ್ಲ. ಇದರಿಂದ ಸಾರ್ವಜನಿಕರು ತಾಲೂಕು ಕಚೇರಿ ಅಲೆಯುವುದು ತಪ್ಪಲಿದೆ ಎಂದು ವಿವರಿಸಿದರು.

    ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಉಪ ತಹಸೀಲ್ದಾರ್ ಎಸ್.ಸಂತೋಷ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts