More

    16 ಕಿಲೋ ತೂಕ ಕಳೆದುಕೊಂಡಿದ್ದೇನೆಂದು ಜಾಮೀನು ಅರ್ಜಿ ಸಲ್ಲಿಸಿದ್ರು ಸಜ್ಜನ್ ಕುಮಾರ್ !

    ನವದೆಹಲಿ: ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್​ ವಿರೋಧಿ ದಂಗೆ ಪ್ರಕರಣದ ಅಪರಾಧಿ ಕಾಂಗ್ರೆಸ್ಸಿನ ಮಾಜಿ ನಾಯಕ ಸಜ್ಜನ್ ಕುಮಾರ್​ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಳ್ಳಿಹಾಕಿದೆ. ಅವರು ಆರೋಗ್ಯದ ನೆಲೆಯಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

    ಕ್ಷಮಿಸಿ ಈ ಅರ್ಜಿಯನ್ನು ನಾವು ಪರಿಗಣಿಸಲಾಗದು. ತಿರಸ್ಕರಿಸಿದ್ದೇವೆ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಶುಕ್ರವಾರ ಹೇಳಿತು. ಸಜ್ಜನ್ ಕುಮಾರ್ ಪರ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಕೋರ್ಟ್​ಗೆ ಹಾಜರಾಗಿದ್ದು, ಸಜ್ಜನ್ ಕುಮಾರ್ ಕಳೆದ 20 ತಿಂಗಳಿಂದ ಜೈಲಿನಲ್ಲಿದ್ದು 16 ಕಿಲೋ ತೂಕ ಕಳೆದುಕೊಂಡಿದ್ದಾರೆ. ಆರೋಗ್ಯ ಸುಧಾರಿಸುವುದಕ್ಕೆ ಜಾಮೀನು ನೀಡಬೇಕು ಎಂದು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ

    ಆದರೆ, ಈ ಅರ್ಜಿಯನ್ನು ದಂಗೆಯ ಸಂತ್ರಸ್ತರ ಪರ ನ್ಯಾಯವಾದಿ ಎಚ್​.ಎಸ್.ಫೂಲ್ಕಾ ಅವರು ವಿರೋಧಿಸಿದ್ದಲ್ಲದೆ, ಸಜ್ಜನ್ ಕುಮಾರ್ ಅವರಿಗೆ ಅಗತ್ಯವಿರುವ ಜೈಲಿನ ಚಿಕಿತ್ಸೆ ಆಸ್ಪತ್ರೆಯಲ್ಲಿ ದೊರೆಯುತ್ತಿದೆ ಎಂದು ವಾದಿಸಿದ್ದರು. ಸಜ್ಜನ್ ಕುಮಾರ್ ಅವರಿಗೆ 2018ರ ಡಿಸೆಂಬರ್​ 17ರಂದು ದೆಹಲಿ ಹೈ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. (ಏಜೆನ್ಸೀಸ್)

    12ನೇ ತರಗತಿ ಪರೀಕ್ಷೆ ಮುಂದೂಡುವ ಅರ್ಜಿಗೆ ಸಿಬಿಎಸ್​ಇ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts