More

    ಕರೊನಾಕ್ಕೆ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಮಾಡಲು ಹೊರಟ ವೈದ್ಯರಿಗೆ ಸುಪ್ರೀಂಕೋರ್ಟ್​ ಏನು ಹೇಳಿದೆ ನೋಡಿ…

    ನವದೆಹಲಿ: ಕರೊನಾ ಹೆಮ್ಮಾರಿಯ ರೌದ್ರನರ್ತನ ದೇಶಾದ್ಯಂತ ಮುಂದುವರಿದಿರುವಂತೆ ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ಸೇರಿ ಆಯುಷ್​ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಅದನ್ನು ಬಳಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

    ಮೊದಲಿಗೆ ಕರೊನಾ ಸೋಂಕಿಗೆ ರೋಗನಿರೋಧಕ ಚುಚ್ಚುಮದ್ದು ಸಿದ್ಧವಾಗಲಿ. ಆ ಬಳಿಕ ಆಯುಷ್​ ಚಿಕಿತ್ಸಾ ಪದ್ಧತಿ ಬಗ್ಗೆ ನಿರ್ಧರಿಸೋಣ ಎಂದು ಹೇಳಿದ ನ್ಯಾಯಮೂರ್ತಿ ಎನ್​.ವಿ. ರಮಣ ನೇತೃತ್ವದ ನ್ಯಾಯಪೀಠ, ಸದ್ಯ ಕರೊನಾಕ್ಕೆ ಆಯುಷ್​ ಚಿಕಿತ್ಸೆ ನೀಡಲು ಅವಕಾಶ ನಿರಾಕರಿಸಿತು.

    ಡಾ. ಸಿ.ಆರ್​. ಶಿವರಾಂ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸಿದ ನ್ಯಾಯಪೀಠ, ಕರೊನಾ ವೈರಸ್​ ಹೊಸದಾಗಿದೆ. ಇದನ್ನು ನಿಯಂತ್ರಿಸುವ ವಿಷಯದಲ್ಲಿ ಸದ್ಯ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ. ತಜ್ಞರು ಮೊದಲು ಇದಕ್ಕೊಂದು ವ್ಯಾಕ್ಸಿನ್​ ಸಿದ್ಧಪಡಿಸಲು. ಆಮೇಲೆ ನೋಡೋಣ ಎಂದು ಹೇಳಿತು.

    ಕೇರಳ ಹೈಕೋರ್ಟ್​ನಲ್ಲಿ ಪೆಂಡಿಂಗ್​: ಆಯುಷ್​ ಇಲಾಖೆ ಏಪ್ರಿಲ್​ 11ರಂದು ಬಿಡುಗಡೆ ಮಾಡಿದ್ದ ಸಲಹಾಪತ್ರದ ಪ್ರಕಾರ ಕೋವಿಡ್​ 19 ಚಿಕಿತ್ಸೆಯಲ್ಲಿ ಹೋಮಿಯೋಪಥಿಯನ್ನು ಬಳಸಬಹುದಾಗಿದೆ. ಇದಕ್ಕೆ ಅವಕಾಶ ಕೋರಿ ಕೇರಳ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

    ಈ ಬಗ್ಗೆ ಅಭಿಪ್ರಾಯ ಕೇಳಿ ಹೈಕೋರ್ಟ್​ ನ್ಯಾಯಪೀಠ ಕೇರಳ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ. ಸರ್ಕಾರ ಇನ್ನಷ್ಟೇ ಪ್ರಮಾಣಪತ್ರ ಸಲ್ಲಿಸಬೇಕಿರುವುದರಿಂದ, ಡಾ. ಎಂ.ಎಸ್​. ವಿನೀತ್​ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಾಗಿದೆ.

    ಮಕ್ಕಳನ್ನು ನಲಿಸುತ್ತಾ ಕಲಿಸುವ ಮಕ್ಕಳವಾಣಿ ಯೂಟ್ಯೂಬ್​ ಚಾನಲ್​; ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಂದ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts