More

    ಚುನಾವಣೆ ಸಂದರ್ಭದಲ್ಲಿ ಬ್ಯಾನರ್​,ಹೋರ್ಡಿಂಗ್ ಮತ್ತು ಇತರೆಡೆ ಪ್ಲಾಸ್ಟಿಕ್ ಬಳಕೆ ವಿಚಾರ| ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್​

    ನವದೆಹಲಿ: ಚುನಾವಣಾ ಪ್ರಚಾರಕ್ಕಾಗಿ ಬ್ಯಾನರ್, ಹೋರ್ಡಿಂಗ್​, ಬಂಟಿಂಗ್ಸ್​ ಮತ್ತು ಇತರೆಡೆ ಪ್ಲಾಸ್ಟಿಕ್​ ಬಳಕೆ ಅವ್ಯಾಹತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್​ ಗುರುವಾರ ನೋಟಿಸ್ ನೀಡಿದೆ.

    ಡಬ್ಲ್ಯು. ಎಡ್ವಿನ್​ ವಿಲ್ಸನ್​ ಎಂಬುವವರು ನ್ಯಾಷನಲ್ ಗ್ರೀನ್​ ಟ್ರಿಬ್ಯೂನಲ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ
    ನ್ಯಾಯಮೂರ್ತಿ ಎಲ್​.ನಾಗೇಶ್ವರ ರಾವ್​, ಚುನಾವಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ನಾಲ್ಕುವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದ್ದಾರೆ.

    ದೂರು ಅರ್ಜಿಯ ಸಾರ: ಚುನಾವಣೆ ಸಂದರ್ಭದಲ್ಲಿ ಪಿವಿಸಿ ಬ್ಯಾನರ್​ಗಳ ಬಳಕೆ ವ್ಯಾಪಕವಾಗಿದ್ದು, ಅದನ್ನು ನಿಷೇಧಿಸಲು ಎನ್​ಜಿಟಿ ಯಾವುದೇ ಪರಿಣಾಮಕಾರಿ ಆದೇಶ ನೀಡಿಲ್ಲ. ಪ್ರಚಾರಕ್ಕೆ ಬಳಸಿದ ಪ್ಲಾಸ್ಟಿಕ್ ಬ್ಯಾನರ್​, ಬಂಟಿಂಗ್ಸ್​, ಹೋರ್ಡಿಂಗ್​ಗಳನ್ನು ಬಳಿಕ ತ್ಯಾಜ್ಯ ಎಂದು ಪರಿಗಣಿಸಲಾಗುತ್ತಿದ್ದು, ಇದರ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಡ್ವಿನ್ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts