More

    ಶುಕ್ರವಾರ ನಿರ್ಧಾರವಾಗುತ್ತಾ ಅಂತಿಮ ಪರೀಕ್ಷೆ ಹಣೆಬರಹ? ಸುಪ್ರೀಂ ಕೋರ್ಟ್​​ ಹೇಳಿದ್ದೇನು?

    ನವದೆಹಲಿ: ಸೆ.30ರೊಳಗಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳ ಅಂತಿಮ ಸೆಮಿಸ್ಟರ್​ ಅಥವಾ ವರ್ಷದ ಪರೀಕ್ಷೆಗಳನ್ನು ಮುಗಿಸಬೇಕೆಂಬ ಯುಜಿಸಿ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ನಡೆಯಿತು.

    ಯುಜಿಸಿ ಆದೇಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ 13 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿವಿಧ ವಿದ್ಯಾರ್ಥಿ ಸಂಘಟನೆಗಳು ಅರ್ಜಿ ಸಲ್ಲಿಸಿವೆ.
    ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಪ್ರತಿದಿನ 50 ಸಾವಿರದಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯುಜಿಸಿ ನಿರ್ದೇಶನಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರ ಪರವಾಗಿ ಅಲಖ್​ ಅಲೋಕ್ ಶ್ರೀವಾಸ್ತವ ಮನವಿ ಮಾಡಿದರು. ದೇಶದ ವಿವಿಧೆಡೆಯ 31 ವಿವಿಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಈಪೈಕಿ ಅರ್ಜಿದಾರರೊಬ್ಬರು ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ; ಪದವಿ, ಪಿಜಿ ಪರೀಕ್ಷೆ ಪರೀಕ್ಷೆ ನಡೆಯುತ್ತೋ, ಇಲ್ಲವೋ? ಗೊಂದಲ ಬಗೆಹರಿಸಿದ ಯುಜಿಸಿ ಮಾರ್ಗಸೂಚಿ 

    ಯುಜಿಸಿ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ದೇಶದ ಒಟ್ಟಾರೆ 818 ವಿವಿಗಳ ಪೈಕಿ 209 ವಿವಿಗಳು ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಿವೆ. ಇನ್ನು, 394 ವಿವಿಗಳು ಇದೇ ಹಾದಿಯಲ್ಲಿವೆ. ವಿದ್ಯಾರ್ಥಿಗಳು ಆನ್​ಲೈನ್​ ಅಥವಾ ಆಫ್​ಲೈನ್​ನಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಒಂದು ಕೋಣೆಯಲ್ಲಿ 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸುವಂತಿಲ್ಲ ಎಮದು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ; ಅಂತಿಮ ಸೆಮಿಸ್ಟರ್​ ಪರೀಕ್ಷೆ ನಡೆಸಲೇಬೇಕು; ಪಟ್ಟು ಹಿಡಿದಿರೋದೇಕೆ ಕೇಂದ್ರ ಸರ್ಕಾರ 

    ಪರೀಕ್ಷೆ ರದ್ದು ಕೋರಿರುವ ಅರ್ಜಿಗಳಿಗೆ ಯುಜಿಸಿ ಪ್ರತಿಕ್ರಿಯೆ ನೀಡಬೇಕೆಂದು ನ್ಯಾಯಮೂರ್ತಿ ಅಶೋಕ್ ಭೂಷಣ್​ ನೇತೃತ್ವದ ಪೀಠ ಸೂಚಿಸಿತು. ಜತೆಗೆ, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ. ಹೀಗಾಗಿ ಶುಕ್ರವಾರವೇ ಪರೀಕ್ಷೆಗಳ ಹಣೆಬರಹ ನಿರ್ಧಾರವಾಗುವ ಸಾಧ್ಯತೆಗಳಿವೆ.

    ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts