More

    ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕುರ್ಚಿಗೆ ಕರ್ನಾಟಕ ಬರೆಯಲಿದೆಯೇ ಇತಿಹಾಸ?

    ನವದೆಹಲಿ: ಸುಮಾರು 70 ವರ್ಷಗಳ ಇತಿಹಾವುಳ್ಳ ಸುಪ್ರೀಂಕೋರ್ಟ್​ ಇದಾಗಲೇ ನೂರಾರು ಮುಖ್ಯನ್ಯಾಯಮೂರ್ತಿಗಳನ್ನು ಕಂಡಿದೆ. ಆದರೆ ಇದುವರೆಗೂ ಒಬ್ಬರೇ ಒಬ್ಬರು ಮಹಿಳಾ ಮುಖ್ಯನ್ಯಾಯಮೂರ್ತಿಗಳನ್ನು ಇದು ಕಂಡಿಲ್ಲ.

    ಆದರೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಹುದ್ದೆಗೆ ಕರ್ನಾಟಕ ಇತಿಹಾಸ ಬರೆಯುವ ದಿನ ದೂರವಿಲ್ಲ.

    ಹೌದು. ಕರ್ನಾಟಕ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿಯಾಗಿರುವ ಬಿ.ವಿ.ನಾಗರತ್ನಾ ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಕುರಿತು ಸುಪ್ರೀಂಕೋರ್ಟ್​ನ ಉನ್ನತ ಮಟ್ಟದ ನೇಮಕಾತಿ ಸಮಿತಿ (ಕೊಲೀಜಿಂ) ಶಿಫಾರಸು ಮಾಡಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ನ್ಯಾ.ನಾಗರತ್ನಾ ಅವರು ಈ ಹುದ್ದೆ ಏರಲಿರುವ ಪ್ರಥಮ ಮಹಿಳೆ ಆಗಲಿದ್ದಾರೆ.

    ಇದನ್ನೂ ಓದಿ: ಮೋದಿ- ಅಮಿತ್ ಷಾ ಮಾತುಕತೆ; ಇನ್ನೆರಡು ವಾರ ಲಾಕ್‌ಡೌನ್ ವಿಸ್ತರಣೆ ನಿರೀಕ್ಷೆ

    ಆದರೆ ಇದು ಅಂದುಕೊಂಡಷ್ಟು ಸುಲಭ ಎಂದೂ ತೋರುತ್ತಿಲ್ಲ. ಏಕೆಂದರೆ ಹಾಲಿ ಮುಖ್ಯನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಅವರ ನೇತೃತ್ವದಲ್ಲಿ ನಡೆದಿರುವ ಪ್ರಾಥಮಿಕ ಹಂತದ ಮಾತುಕತೆಯಲ್ಲಿ ಇವರ ಹೆಸರು ಕೇಳಿಬಂದಿದ್ದರೂ, ಇವರ ನೇಮಕಕ್ಕೆ ಸ್ವಲ್ಪ ವಿರೋಧವೂ ಕೇಳಿಬಂದಿದೆ ಎನ್ನಲಾಗಿದೆ.

    ಕರ್ನಾಟಕದಿಂದ ಈಗಾಗಲೇ ಹಲವಾರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್​ಗೆ ನೇಮಕಗೊಂಡಿದ್ದಾರೆ. ಅವರಲ್ಲಿ ಕೆಲವರು ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೂ ಏರಿದ್ದಾರೆ. ಆದ್ದರಿಂದ ಇತರ ಹೈಕೋರ್ಟ್​ನ ನ್ಯಾಯಮೂರ್ತಿಗಳಿಗೂ ಅವಕಾಶ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದವರಾಗಿರುವ ನ್ಯಾ.ನಾಗರತ್ನಾ ಅವರ ಹೆಸರಿಗೆ ಅಪಸ್ವರ ಕೇಳಿಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅರ್ಹತೆಯ ಆಧಾರದ ಮೇಲೆ ಪರಿಗಣಿಸುವುದಾದರೆ ಇವರು ಖಂಡಿತವಾಗಿಯೂ ಈ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎಂದೂ ಹೇಳಲಾಗುತ್ತಿದೆ.

    ನ್ಯಾಯಮೂರ್ತಿ ನಾಗರತ್ನಾ ಅವರು 1989ರಲ್ಲಿ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಆಗಿದ್ದ ಇ.ಎಸ್​.ವೆಂಕಟರಾಮಯ್ಯ ಅವರ ಪುತ್ರಿ.

    ಇದನ್ನೂ ಓದಿ: VIDEO: ರಾತ್ರೋರಾತ್ರಿ ಈ 76ರ ಅಜ್ಜಿ ರಾಕಿಂಗ್​ ಸ್ಟಾರ್​ ಆದದ್ದೇಕೆ?

    ಸುಪ್ರೀಂಕೋರ್ಟ್​ನ ಪ್ರಸ್ತುತ ಎರಡು ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ನ್ಯಾ.ಆರ್​.ಭಾನುಮತಿ (ಜುಲೈ 19) ಹಾಗೂ ನ್ಯಾ. ಅರುಣ್​ ಮಿಶ್ರಾ (ಸೆ.2) ಅವರು ನಿವೃತ್ತರಾಗಲಿದ್ದು, ಇನ್ನೂ ಎರಡು ಹುದ್ದೆಗಳ ಖಾಲಿ ಉಳಿಯಲಿವೆ. ಈ ಹಿನ್ನೆಲೆಯಲ್ಲಿ ನ್ಯಾ.ನಾಗರತ್ನಾ ಅವರ ನೇಮಕಾತಿ ಈಗ ಅಲ್ಲದಿದ್ದರೂ ಮುಂದೆ ಖಂಡಿತ ಸಾಧ್ಯವಿದೆ ಎಂದು ಕಾನೂನು ವಲಯಗಳಲ್ಲಿ ಚರ್ಚೆಯಾಗುತ್ತಿದೆ.

    1962ರಲ್ಲಿ ಜನಿಸಿರುವ ನ್ಯಾ.ನಾಗರತ್ನಾ ಅವರಿಗೆ ಈಗ 58 ವರ್ಷಗಳು. ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಇರುವ ಹಿನ್ನೆಲೆಯಲ್ಲಿ ನಾಗರತ್ನಾ ಅವರಿಗೆ ಈ ಹುದ್ದೆ ಏರಲು ಸಾಕಷ್ಟು ಅವಕಾಶಗಳು ಇವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

    ಪುಲ್ವಾಮಾ ರೀತಿ ದಾಳಿ ನಡೆಸಲು ಸಿದ್ಧನಾಗಿ ಬಂದಿದ್ದ ಉಗ್ರನ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts