More

    ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿರುವ 50 ಲಕ್ಷ ಷೇರುಗಳನ್ನು ಮಾರಾಟ ಮಾಡಲು ಎಸ್​ಬಿಐ ಚಿಂತನೆ

    ನವದೆಹಲಿ: ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ)ನ ಷೇರುಗಳ ಪೈಕಿ 50 ಲಕ್ಷ ಷೇರುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಮಾರಾಟ ಮಾಡಲು ಚಿಂತನೆ ನಡೆಸಿದೆ.

    ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಎಸ್​ಬಿಐ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ ಆಫ್ ಇಂಡಿಯಾ ಲಿಮಿಟೆಡ್​ನ ಪಾಲುದಾರರ ಪೈಕಿ ಎಸ್​ಬಿಐ ಕೂಡ ಒಂದು. ಎಸ್​ಬಿಐ ಬಳಿ ಶೇಕಡ 5.19 ಪಾಲು ಇದ್ದು, 50 ಲಕ್ಷ ಷೇರುಗಳು ಎಂದರೆ ಶೇಕಡ 1.01 ಆಗುತ್ತದೆ. ಇವುಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ.ಈ ಷೇರುಗಳಿಗೆ ಬಿಡ್ ಸಲ್ಲಿಸುವರರು ಕನಿಷ್ಠ 10,000 ಷೇರುಗಳಿಗೆ ನಿಗಿದತ ಅರ್ಜಿ ನಮೂನೆಯಲ್ಲಿ ಬಿಡ್ ಸಲ್ಲಿಸಬೇಕು. ಬಿಡ್ ಸಲ್ಲಿಕೆಗೆ ಜನವರಿ 15 ಕೊನೇ ದಿನ ಎಂದಿದೆ.

    ಎಸ್​ಬಿಐ 2016ರಲ್ಲಿ ತನ್ನ ಬಳಿ ಇದ್ದ ಎನ್​ಎಸ್​ಇಯ ಶೇಕಡ 5 ಷೇರುಗಳನ್ನು 911 ಕೋಟಿ ರೂಪಾಯಿಗೆ ಮಾರಿಷಸ್ ಮೂಲದ ವೆರಾಸಿಟಿ ಇನ್​ವೆಸ್ಟ್​ಮೆಂಟ್​ ಗೆ ಮಾರಾಟ ಮಾಡಿತ್ತು. ಇದರೊಂದಿಗೆ ಎನ್​ಎಸ್​ಇನಲ್ಲಿ ಎಸ್​ಬಿಐನ ಪಾಲು ಶೇಕಡ 5.19ಕ್ಕೆ ಇಳಿಕೆಯಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts