More

    ವಿವಿಧೆಡೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

    ವಿಜಯಪುರ: ಇಲ್ಲಿನ ಚೇತನಾ ಶಿಕ್ಷಣ ಸಂಸ್ಥೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಂಸ್ಥೆ ಚೇರ್ಮನ್ ಹಾಗೂ ಪ್ರಾಚಾರ್ಯ ಡಾ.ದಯಾನಂದ ಜುಗತಿ ಉದ್ಘಾಟಿಸಿದರು.
    ಮುಖ್ಯೋಪಾಧ್ಯಾಯ ಎ.ಎಚ್.ಕೊಳಮಲಿ, ಉಪಾಧ್ಯಕ್ಷೆ ರಾಜಶ್ರೀ ಜುಗತಿ, ಕಾರ್ಯದರ್ಶಿ ಜಯಶ್ರೀ ಬುರ್ಲಿ, ನಿರ್ದೇಶಕ ನಾಗರಾಜ ಹೇರಲಗಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
    ಹೊನ್ನಳ್ಳಿ: ಇಲ್ಲಿನ ಶಿವಶರಣೆ ನಿಂಬೆಕ್ಕ ಪ್ರೌಢಶಾಲೆ ಹಾಗೂ ಡಿ.ಎಂ. ಕುಮಾನಿ ಪಪೂ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಗುರುಮಾತೆಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
    ಶಿವಮೂರ್ತಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಎಸ್.ಡಿ. ಕುಮಾನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಸಾರಿಕಾ ಕೋರೆ, ಭಾಗ್ಯಶ್ರೀ ಲಾಳಿ, ಕವಿತಾ, ಸುವರ್ಣಾ ಹೊನ್ನಳ್ಳಿ, ವಿಜಯಲಕ್ಷ್ಮಿ ಬಿಸನಾಳ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಮಾಲಗಾರ, ರಾಮಗೊಂಡ ತೊನಶ್ಯಾಳ, ಬಸವರಾಜ ಕುಮಾನಿ, ಪಿ.ಎಸ್. ಕುಮಾನಿ, ಬಿ.ಜೆ. ಗರೇಬಾಳ ಮತ್ತಿತರರು ಉಪಸ್ಥಿತರಿದ್ದರು.
    ಎಚ್.ಪಿ. ದೇಶಪಾಂಡೆ ಸ್ವಾಗತಿಸಿದರು. ಜಿ.ಕೆ. ಜಹಾಗೀರದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಸ್.ಎಂ. ಮನಿಯಾರ್ ನಿರೂಪಿಸಿದರು. ಎಸ್.ಎಂ. ಪಾಠಕ ವಂದಿಸಿದರು.
    ಮಹಾತ್ಮ ಗಾಂಧಿ ಶಾಲೆ: ಜಯ ಕರ್ನಾಟಕ ರಕ್ಷಣಾ ಸೇನೆ ಸಹಯೋಗದಲ್ಲಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭೋಸಲೆ, ಶಾಲೆ ಆಡಳಿತಾಧಿಕಾರಿ ಎಸ್.ಟಿ. ಪೋಳ, ಬಸವರಾಜ ಗಳವೆ, ಶಿವು ಬೆನಕನಹಳ್ಳಿ, ಕುಮಾರ ಮದಭಾವಿ, ಅರವಿಂದ ಗೊಣಸಗಿ, ಸೋಮನಗೌಡ ಪಾಟೀಲ, ಕಲ್ಲು ಬಳ್ಳಾರಿ, ಕುಮಾರ ವರ್ಧನ, ಮಲ್ಲಿಕಾರ್ಜುನ ತಿಪ್ಪನಟ್ಟಿ, ಸಿದ್ರಾಮ ಮುಳಸಾವಳಗಿ, ಶ್ರೀಕಾಂತ ಬೆನಕನಹಳ್ಳಿ ಮತ್ತಿತರರು ಭಾಗವಹಿಸಿದ್ದರು.
    ಫೆಡಿನಾ ಸಂಸ್ಥೆ: ಇಲ್ಲಿ ನಡೆದ ಸಮಾರಂಭದಲ್ಲಿ ಭುವನೇಶ್ವರಿ ದೊಡಮನಿ ಮಾತನಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಅವರ ಕಾರ್ಯ ಶ್ಲಾಘನೀಯ ಎಂದರು. ಭಾಗ್ಯಶ್ರೀ ಲವಗಿ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಇಳಕಲ್, ಮಹಾದೇವಿ ಕದ್ನಳ್ಳಿ, ಯಲ್ಲವ್ವ ಇಳಕಲ್ಲ, ನೀಲಮ್ಮ ಹೊಸಮನಿ ಉಪಸ್ಥಿತರಿದ್ದರು. ಪ್ರಭುಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತಾ ಪೂಜಾರಿ ಸ್ವಾಗತಿಸಿದರು. ಮಹಾಬೂಬಿ ಪಾಂಡಗೋಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts