More

  ಸಾವಿತ್ರಿಬಾಯಿ ಆದರ್ಶ ಮಹಿಳೆ

  ಕಾಗವಾಡ: ಸಮಾಜದಲ್ಲಿನ ನೋವು, ಅವಮಾನ ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗೆ ಶಾಲೆ ಆರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಅವರ ಕಾರ್ಯ ಶ್ಲಾಘನೀಯ ಎಂದು ಕಾಗವಾಡ ಗುರುದೇವಾಶ್ರಮದ ಪ.ಪೂ.ಯತೀಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.

  ಕಾಗವಾಡ ಪಟ್ಟಣದಲ್ಲಿ ಶುಕ್ರವಾರ ಮಾಳಿ ಸಮಾಜಸೇವಾ ಸಂಘ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣದ ತಾಯಿಯಾಗಿ ಸಾವಿತ್ರಿಬಾಯಿ ಫುಲೆ ಅವರು ವಿದ್ಯಾರ್ಥಿನಿಯವರಿಗೆ ಶಿಕ್ಷಣ, ಆಶ್ರಯ ನೀಡುವುದರ ಜತೆಗೆ ಉತ್ತಮ ಸಂಸ್ಕಾರ ನೀಡಿದ್ದಾರೆ ಎಂದರು. ಎಸ್.ಕೆ.ಅಳಗುಂಡಿ, ತಾತ್ಯಾಂಭಟ್ ಜೋಷಿ, ಲಕ್ಷ್ಮಣ ಸೂರ್ಯವಂಶಿ, ದಯಾನಂದ ಕಾಂಬಳೆ ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು. ಮಾಳಿ ಸಮುದಾಯದ ತುಕಾರಾಮ ಮಾಳಿ ದಂಪತಿಯನ್ನು ಸನ್ಮಾನಿಸಲಾಯಿತು. ಕಾಗವಾಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಚೌಗಲಾ, ಸುಭಾಷ ಕಟಾರೆ, ಬಿಜೆಪಿ ಮುಖಂಡ ಮಹಾದೇವ ಕೋರೆ, ರಾಜು ಮಾನೆ, ಪ್ರಕಾಶ ಮಿರ್ಜಿ, ಎಸ್.ಕೆ.ಅಳಗುಂಡಿ, ಅನಿಲ ಪಾಂಡುರಂಗ ಕೋರೆ, ಮಾರುತಿ ಕನಾಳ, ಸಂತೋಷ ಮಾಳಿ, ವಿಲಾಸ ಮಾಳಿ, ಅಪ್ಪಾಸಾಬ ಮಾಳಿ, ಮಲ್ಲಿಕಾರ್ಜುನ ಮಾಳಿ, ರಾವಸಾಬ ಮಾಳಿ, ಚೇತನ ಮಾಳಿ, ಸಹದೇವ ಮಾಳಿ, ಶಂಕರ ಕೋರೆ, ವಸಂತ ಕೋರೆ ಹಾಗೂ ಗ್ರಾಮಸ್ಥರು ಇದ್ದರು.

  ತೆಲಸಂಗ ವರದಿ: ಸಾವಿತ್ರಿಬಾಯಿ ಫುಲೆ ಹಿಂದುಳಿದ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ ಸ್ಥಾಪಿಸಿದ ಕ್ರಾಂತಿಕಾರಿ ಮಹಿಳೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದ್ದಾರೆ. ಗ್ರಾಮದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ಫುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 150 ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದವರು. ಎಲ್ಲರಿಗೂ ಅಕ್ಷರ ಜ್ಞಾನ ದೊರೆಯಬೇಕೆಂಬ ಉದ್ದೇಶ ಫುಲೆ ಅವರದ್ದಾಗಿತ್ತು ಎಂದರು.

  ಐ.ಎಲ್.ಕುಮಠಳ್ಳಿ ಹಾಗೂ ವಿವೇಕಾನಂದ ಹಳಿಂಗಳಿ ಹಾಗೂ ಸುಭಾಸ ಕಾಂಬಳೆ ಮಾತನಾಡಿ, 1848ರಲ್ಲಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿಕೊಂಡು ಸಾವಿತ್ರಿಬಾಯಿ ಕೆಳ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ್ದು, ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದರು. ಕಾಶೀನಾಥ ಕುಂಬಾರಕರ, ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ನ್ಯಾಯವಾದಿ ಪ್ರಕಾಶ ಮೋರೆ, ಡಾ.ಬಸವರಾಜ ರೋಡಗಿ, ಡಾ.ಎಸ್.ಐ.ಇಂಚಗೇರಿ, ಡಾ.ಬಿ.ಎಸ್.ಕಾಮನ್, ಮಾಯಪ್ಪ ನಿಡೋಣಿ, ಗುರುರಾಜ ಕುಂಬಾರ, ಗುರಯ್ಯ ಮಠಪತಿ, ವಾಸು ಮೋರೆ, ಅಪ್ಪಗೌಡ ಪಾಟೀಲ, ಬರಮಣ್ಣ ಸೇಗಾರ, ಸಿದ್ದು ಕೋಡ್ನಿ, ರವಿ ಕವಟಗಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts