More

    ಕಮ್ಮಟಗಳ ಮೂಲಕ ಯಕ್ಷಗಾನ ಉಳಿಸಿ

    ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ಹಿರೇನೆಲ್ಲೂರು, ಸೈದೂರು, ಕಾನ್ಲೆ ಗ್ರಾಪಂ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಭತ್ತ ಮಳೆ ಕೊರತೆಯಿಂದ ಸಂಪೂರ್ಣ ಹಾಳಾಗಿದ್ದು ರೈತರ ನೆರವಿಗೆ ಪಂಚಾಯಿತಿ ಧಾವಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಹಿರೇನೆಲ್ಲೂರು ಗ್ರಾಪಂ ಅಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಮಂಜಪ್ಪ ಹಿರೇನೆಲ್ಲೂರು ಮಾತನಾಡಿ, ತಾಳಗುಪ್ಪ ಹೋಬಳಿಯ ಹಿರೇನೆಲ್ಲೂರು, ಸೈದೂರು, ಕಾನ್ಲೆ ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ಸರಿಯಾಗಿ ಆಗಿಲ್ಲ. ರೈತರು ಮಳೆ ಆಶ್ರಯಿಸಿ ಭತ್ತದ ಬಿತ್ತನೆ ಮತ್ತು ನೆಟ್ಟಿ ಮಾಡಿದ್ದರು. ಕುರುಡು ಹದವಾಗಿ ಬಿತ್ತಿದ ತ್ತ ಸಂಪೂರ್ಣ ನಾಶವಾಗಿದೆ. ರೈತರು ಹೊಸದಾಗಿ ಭತ್ತದ ಬೀಜ ಖರೀದಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ ಎಂದರು.
    ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯದೆ ನಷ್ಟ ಅನುಭವಿಸುತ್ತಿದ್ದಾರೆ. ಭತ್ತ ಬೆಳೆಯುವ ಪ್ರದೇಶವನ್ನು ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಅಲ್ಪಾವಧಿಗೆ ಬರುವ ಹೈಬ್ರಿಡ್ ತಳಿಯನ್ನು ಎಕರೆಗೆ 25 ಕೆ.ಜಿ., 50 ಕೆ.ಜಿ. ರಾಸಾಯನಿಕ ಗೊಬ್ಬರ ಹಾಗೂ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ 30 ಮಾನವ ದಿನಗಳ ಕೂಲಿಯನ್ನು ಕ್ರಿಯಾಯೋಜನೆ ಮಾಡಿ ಭತ್ತ ಕಳೆದುಕೊಂಡ ರೈತರಿಗೆ ನೀಡಬೇಕು. ವಿಶೇಷ ಗ್ರಾಮಸಭೆ ಕರೆದು ಇಲಾಖೆವಾರು ಕಳಿಸಿಕೊಡಬೇಕು. ಇದರಿಂದ ರೈತರಿಗೆ ತಾತ್ಕಾಲಿಕ ಪರಿಹಾರ ಸಿಗುತ್ತದೆ. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಮೇಶ್ ಐಗಿನಬೈಲು, ಪ್ರಮುಖರಾದ ಆಲಳ್ಳಿ ದೇವು, ಮಂಜಪ್ಪ ಗುತ್ತಿನಹಳ್ಳಿ, ಯಲಕುಂದ್ಲಿ ರಾಜೇಶ್, ಸುರೇಶ್ ಇತರರಿದ್ದರು. ಸೈದೂರು ಮತ್ತು ಕಾನ್ಲೆ ಗ್ರಾಪಂಗೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts