More

    ಕರೊನಾ ಎರಡನೇ ಅಲೆಯಿಂದ ಹಳ್ಳಿಗರನ್ನು ರಕ್ಷಿಸಿ

    ಕರೊನಾ ಎರಡನೇ ಅಲೆಯಿಂದ ಹಳ್ಳಿಗರನ್ನು ರಕ್ಷಿಸಿ

    ಕರೊನಾ ಎರಡನೇ ಅಲೆ ಈಗ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಹಾಗಾಗಿ ಹಳ್ಳಿಯ ಜನರನ್ನು ಸರ್ಕಾರ ಆದಷ್ಟು ಜಾಗರೂಕತೆಯಿಂದ ಈ ಕರೊನಾ ಮಹಾಮಾರಿಯಿಂದ ರಸಬೇಕು. ಹಳ್ಳಿಯ ಜನರು ನಗರದವರಂತೆ ಸುಶಿತ ವರ್ಗದವರಲ್ಲ. ಕರೊನಾ ಜಗತ್ತಿಗೆ ಬಂದು ವರ್ಷವಾದರೂ ಈ ರೋಗದ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ. ಹಳ್ಳಿಗಳಲ್ಲಿ ಕರೊನಾ ಸೋಂಕು ಹರಡದಂತೆ ಕ್ರಮ ಕೆಗೊಳ್ಳಲು ಸ್ಥಳಿಯ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ಅಧಿಕಾರ ಹಾಗೂ ಅರ್ಥಿಕ ಸಹಾಯ ನೀಡಬೇಕು. ಕರೊನಾ ಗುಣಲಕ್ಷಣ ಹೊಂದಿದವರಿಗೆ ಪ್ರತ್ಯೇಕವಾಗಿ ಇರಿಸಲು ಆಯಾ ಪಂಚಾಯಿತಿ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ಆರೊಗ್ಯ ಇಲಾಖೆ ಸಲಹೆಯಂತೆ ಗ್ರಾಮಗಳಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಏಕೆಂದರೆ ಶೇಕಡ 90ರಷ್ಟು ಕರೊನಾ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ತಜ್ಞರೇ ಸ್ಪಷ್ಟಪಡಿಸಿದ್ದಾರೆ. ಪಂಚಾಯಿತಿಗಳಿಗೆ ಆಕ್ಸಿಮೀಟರ್​, ಥರ್ಮೊಮೀಟರ್​ ಹಾಗೂ ತುರ್ತುಪರಿಸ್ಥಿತಿ ನಿರ್ವಹಣೆಗೆ ವೈದ್ಯಕಿಯ ಆಮ್ಲಜನಕ ಸಿಲಿಂಡರ್​ಗಳನ್ನು ಒದಗಿಸಬೇಕು. ಈ ಮೂಲಕ ಹಳ್ಳಿಗಳಲ್ಲಿಯೇ ಕರೊನಾ ಗೆಲ್ಲುವ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ಆಸ್ಪತ್ರೆಗಳಲ್ಲಿನ ಜನಜಂಗುಳಿ ತಪ್ಪುತ್ತದೆ ಹಾಗೂ ಹಳ್ಳಿಗರಲ್ಲಿ ಧೈರ್ಯ ಮೂಡುತ್ತದೆ.

    | ಲಕ್ಷ್ಮೀಕಾಂತಗೌಡ ಪಾಟೀಲ ಚೋರಗಿ (ವಿಜಯಪುರ ಜಿಲ್ಲೆ)

    ನಿಯಮಗಳ ಬಗ್ಗೆ ಅರಿವು ಮೂಡಿಸಿ

    ವಾಹನದಟ್ಟಣೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಆದರೆ, ಹದಿಹರೆಯ ವಯಸ್ಸಿನವರು ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಓಡಿಸಿಕೊಂಡು ಹೋಗುವುದನ್ನು ಕಾಣುತ್ತಿದ್ದೇವೆ. ಇವರಲ್ಲಿ ಹೆಚ್ಚಿನವರಿಗೆ 18 ವರ್ಷ ಪ್ರಾಯವೂ ಆಗಿರುವುದಿಲ್ಲ, ಲೈಸೆನ್ಸೂ ಇರುವುದಿಲ್ಲ, ರಸ್ತೆ ನಿಯಮ, ಸುರಕ್ಷಾ ನಿಯಮಗಳೂ ಗೊತ್ತಿರುವುದಿಲ್ಲ. ಅಪಾಯಕಾರಿ ಚಾಲನೆ ಜತೆಗೆ ನಿಯಮಗಳನ್ನು ಕೂಡ ಉಲ್ಲಂಘಿಸುತ್ತಾರೆ. ಹೆತ್ತವರು ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡಬೇಕು ಮತ್ತು ಸಾರಿಗೆ ಇಲಾಖೆ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು.

    | ಪಿ. ಜಯವಂತ ಪೈ ಕುಂದಾಪುರ

    ʼಸನಾತನ ಧರ್ಮದಲ್ಲಿ ಗುರುವಿನ ಪಾತ್ರ’: ಮನೋಜ್ಞ ಲೇಖನ

    “ವಿಜಯವಾಣಿ’ಯಲ್ಲಿ ಏಪ್ರಿಲ್​ 21ರಂದು ಪ್ರಕಟವಾದ ಸದ್ಗುರು ಮಧುಸೂದನ ಸಾಯಿಯವರ ಲೇಖನ “ಸನಾತನ ಧರ್ಮದಲ್ಲಿ ಗುರುವಿನ ಪಾತ್ರ’ ಮನೋಜ್ಞ ಮತ್ತು ಮಾರ್ಗದರ್ಶಕವಾಗಿತ್ತು. ವಿದ್ವಾಂಸರು, ಸಂಸ್ಕೃತಿ ಚಿಂತಕರೂ ಆದ ಮಧುಸೂದನ ಸಾಯಿಯವರು ಲೇಖನದಲ್ಲಿ ಗುರು-ಶಿಷ್ಯ ಸಂಬಂಧದ ವೈಶಿಷ್ಟ್ಯ, ಆದರ್ಶ ಗುರುವಿನ ಹಾಗೂ ಶಿಷ್ಯನ ಲಕ್ಷಣಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಂದಿನ ಕಾಲದ ಗುರುಕುಲಗಳು ಆದರ್ಶಪ್ರಾಯವಾಗಿದ್ದು, ಜಗತ್ತಿಗೇ ಮಾರ್ಗದರ್ಶನ ಮಾಡುತ್ತಿದ್ದವು. ದಯಾಸಿಂಧುವಾದ ಗುರು ರಿಭು ತನ್ನ ಶಿಷ್ಯ ನಿದಾನನ್ನು ಪರೀಸಿ, ಹರಸಿದ ರೀತಿ ಆದರ್ಶಪ್ರಾಯವಾಗಿದೆ. ಇಂದಿಗೂ ಜೀವನದ ಪರಮಗುರಿಯಾದ ಬ್ರಹ್ಮಜ್ಞಾನವನ್ನು ಪಡೆದ ಗುರುಗಳು ಹಾಗೂ ತಮ್ಮಲ್ಲಿನ ಸ್ವಾರ್ಥ, ಸಂಕುಚಿತ ಭಾವನೆಗಳನ್ನು ಬಿಟ್ಟು ಗುರುವಿನಲ್ಲಿ ಶರಣಾಗಿ ಬರುವ ಶಿಷ್ಯರೊಳಗೊಂಡ ಗುರುಕುಲಗಳು ಬೇಕಾಗಿವೆ.

    | ಯಂ. ರಾಮಮೂರ್ತಿ ಮುದ್ದೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts