More

    ಬಿರು ಬೇಸಿಗೆಗೆ ಬತ್ತಿದ ಜಲಪಾತ್ರೆ ಕೆರೆಯಂಗಳದ ಜಲಚರಗಳಿಗೆ ಕುತ್ತು

    ನ್ಯಾಮತಿ: ಬಿರು ಬಿಸಿಲಿಗೆ ತಾಲೂಕಿನ ಬಹುತೇಕ ಕೆರೆಗಳ ಒಡಲು ಬರಿದಾಗಿದ್ದು ಜಲಚರಗಳಿಗೂ ಕುತ್ತು ಬಂದೊದಗಿದೆ.

    ತಾಲೂಕಿನಲ್ಲಿ ಅಂದಾಜು 90 ಕೆರೆಗಳಿದ್ದು, ಬಹುತೇಕ ಕಡೆ ನೀರಿನ ಮಟ್ಟ ತೀವ್ರ ಕುಸಿದಿದೆ. ಈ ಬಾರಿ ಮಾರ್ಚ್ ಒಳಗೆ ಒಂದು ಮಳೆಯಾಗದ ಕಾರಣ ನೀರು ಬತ್ತಿ ಹೋಗಿದ್ದು, ವರ್ಷದುದ್ದಕ್ಕೂ ಬರ ಆವರಿಸಿತ್ತು.

    ಸೋಮವಾರ ಸವಳಂಗ ಗ್ರಾಮದ ಕೆರೆಯ ಉಳಿದ ನೀರಿನಲ್ಲೇ ಕೆಲವರು ಬಲೆ ಹಾಕಿ ಮೀನು ಬೇಟೆಯಲ್ಲಿ ತೊಡಗಿದ್ದು ಕಂಡುಬಂತು.

    ತಾಲೂಕಿನ 90 ಕೆರೆಗಳಲ್ಲಿ ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಮತ್ತು ಗ್ರಾಪಂಗಳ ವ್ಯಾಪ್ತಿಯಲ್ಲಿವೆ. 2019, 2020, 2021, 2022ರ ಮಳೆಗಾಲದಲ್ಲಿ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿದ್ದವು.

    ಆದರೆ, 2023ರಲ್ಲಿ ಮಳೆಯ ಕೊರತೆಯಿಂದ ತಾಲೂಕಿನ ಯಾವ ಕೆರೆಯೂ ಭರ್ತಿಯಾಗಲಿಲ್ಲ. ಇದರಿಂದ ಈ ಬೇಸಿಗೆಯ ಬಿರು ಬಿಸಿಲಿನಿಂದ ಕೆರೆಯ ತಾಲೂಕಿನ ಬಹುತೇಕ ಕೆರೆಗಳ ಒಡಲು ಬರಿದಾಗಿದ್ದು, ಇವುಗಳಲ್ಲಿನ ಮೀನುಗಳಿಗೆ ಕುತ್ತು ಬಂದೊದಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts