More

    ರಣಮಳೆಗೆ ಜನಜೀವನ ಅಸ್ತವ್ಯಸ್ತ

    ಸಾವಳಗಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ.

    ದ್ರಾಕ್ಷಿ ಬೆಳೆಯಲ್ಲಿ ರೋಗಗಳು ಉತ್ಪತ್ತಿಯಾಗುತ್ತಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಉಳಿಸಿಕೊಳ್ಳಲು ಔಷಧ ಖರೀದಿಸಲು ಹರಸಾಹಸ ಪಡುತ್ತಿದ್ದಾರೆ.

    ಹಲವು ವರ್ಷಗಳಿಂದ ಬತ್ತಿಹೋಗಿದ್ದ ಸಾವಳಗಿ ಹಳ್ಳ ತುಂಬಿ ಹರಿಯುತ್ತಿದೆ. ನಿರಂತರ ಮಳೆಯಿಂದಾಗಿ ಮನೆಗಳು ಕುಸಿಯುತ್ತಿವೆ. ಪಂಚಾಯಿತಿ ಸಮೀಪದಲ್ಲಿ ರಮೇಶ ಮಾನೋಜಿ ಎಂಬುವವರ ಮನೆ ಬಿದ್ದಿರುವ ಪರಿಣಾಮ ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಮಹಾವೀರ ಹಳಿಂಗಳಿ ಎಂಬುವವರ ಮನೆ ಸಂಪೂರ್ಣವಾಗಿ ಕುಸಿದಿದ್ದು, ಸಿದ್ದು ಗವಳಿ ಎಂಬುವವರ ಧನದ ಕೊಟ್ಟಿಗೆ ಕುಸಿದು ಹಸು ಮೃತಪಟ್ಟಿದೆ. ಗ್ರಾಮದಲ್ಲಿ ಮಣ್ಣಿನ ಮನೆಗಳ ಛಾವಣಿಗಳು ಸೋರುತ್ತಿದ್ದು, ಜನರಿಗೆ ವಾಸಿಸಲು ಸ್ಥಳವಿಲ್ಲದಂತಾಗಿದೆ. ಮಳೆಯಿಂದ ನೆನೆದ ಮೇಲ್ಮುದ್ದಿ ಮನೆಗಳು ಕುಸಿಯುವ ಸಂಭವ ಹೆಚ್ಚಾಗಿದ್ದು, ಜನ ಕೈಯಲ್ಲಿ ಜೀವ ಹಿಡಿದುಕೊಂಡು ಬದುಕು ಸಾಗಿಸುತ್ತಿದ್ದಾರೆ. ಭೀಕರ ಮಳೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ನೊಂದವರ ಕುಟುಂಬಗಳನ್ನು ಭೇಟಿ ಮಾಡಿಲ್ಲ ಎಂಬುದು ಗ್ರಾಮಸ್ಥರ ಅಳಲು.

    ವಾಸಿಸಲು ಇದೊಂದೆ ಮನೆ ಇರುವುದರಿಂದ ಸದ್ಯ ಮಳೆಯಿಂದಾಗಿ ಮನೆ ಬಿದ್ದಿದೆ. ಜಾನುವಾರು ಸಹಿತವಾಗಿ ಬೇರೆ ಕಡೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಉಂಟಾಗಿದೆ. ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ವಾಸಿಸಲು ಸ್ಥಳದ ಅವಶ್ಯಕತೆ ಇದೆ.
    ಮಹಾವೀರ ಹಳಿಂಗಳಿ, ಗ್ರಾಮಸ್ಥ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts