More

    ಸಾಸ್ವೆಹಳ್ಳಿ ಬಳಿ ಅಂತೂ ಚಿರತೆ ಸೆರೆ; ಅರಣ್ಯ ಇಲಾಖೆ ಇಟ್ಟ ಬೋನಿಗೆ ಬಿದ್ದಿತು, ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ದೂರ

    ಸಾಸ್ವೆಹಳ್ಳಿ: ಸಾಸ್ವೆಹಳ್ಳಿ ಹೋಬಳಿ ಹಳ್ಳಿಗಳಲ್ಲಿ ಕಳೆದೆರಡು ತಿಂಗಳಿಂದ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಚಿರತೆ ಅಂತೂ ಬೋನಿಗೆ ಬಿದ್ದಿದೆ.

    ಕ್ಯಾಸಿನಕೆರೆ, ಹಟ್ಟಿಹಾಳ್, ಚೀಲಾಪುರ, ಬೈರನಹಳ್ಳಿ, ಹುಣಸಘಟ್ಟ ಗ್ರಾಮಗಳ ಹೊರ ವಲಯದಲ್ಲಿ ಅನೇಕ ಬಾರಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ರಾತ್ರಿ ವೇಳೆ ಗ್ರಾಮದೊಳಗೆ ನುಗ್ಗಿ ಬೀದಿ ನಾಯಿಗಳನ್ನು ಎಳೆದೊಯತ್ತಿತ್ತು. ಇದರಿಂದ ಜನತೆ ತೀವ್ರ ಭಯ ಬೀತರಾಗಿದ್ದರು. ಸಂಜೆ ಕತ್ತಲಾಗುತ್ತಲೇ ಮನೆ ಹೊರಗೆ ಹೆಜ್ಜೆ ಇಡಲು ಹೆದರುತ್ತಿದ್ದರು.

    ಚಿರತೆ ಉಪಟಳದಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಚಿರತೆ ಸೆರೆ ಹಿಡಿಯಲು ಸಿಬ್ಬಂದಿ ಸೋಮವಾರ ರಾತ್ರಿ ಬೈರನಹಳ್ಳಿ ಗ್ರಾಮದ ಬಳಿ ಶ್ರೀನಿಧಿ ಎಸ್ಟೇಟ್‌ನಲ್ಲಿ ಬೋನಿಟ್ಟಿದ್ದರು.

    ಮೊದಲು ಹಟ್ಟಿಹಾಳ್ ಗ್ರಾಮದ ಹೊರ ಹೊಲಯದಲ್ಲಿ ಬೋನ್ ಇರಿಸಲಾಗಿತ್ತು. ಆದರೆ, ಇಲ್ಲಿ ಬೋನಿಗೆ ಬಿದ್ದಿರಲಿಲ್ಲ. ಶನಿವಾರ ಬೈರನಹಳ್ಳಿ ಗ್ರಾಮದ ಹೊರ ಹೊಲಯದಲ್ಲಿ ಎಪಿಎಂಸಿ ಸದಸ್ಯ ಜಿವಿಎಂ ರಾಜು ಅವರಿಗೆ ಕಾಣಿಸಿತ್ತು. ಹಾಗಾಗಿ ಬೋನ್ ಅನ್ನು ಭಾನುವಾರ ಬೈರನಹಳ್ಳಿ ಗ್ರಾಮದ ಶ್ರೀನಿಧಿ ಎಸ್ಟೇಟ್‌ಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೀಮ್‌ಸೇನ್, ಎಂ.ವಿ.ಸಿದ್ದೇಶ್, ಮಲ್ಲೇಶ್, ದೇವೇಂದ್ರಪ್ಪ, ರಮೇಶ್, ಚಮನ್‌ಸಾಬ್ ಇತರರಿದ್ದರು.

    ತ್ಯಾವರೆಕೊಪ್ಪ ಲಯನ್ ಸಫಾರಿಗೆ ಸ್ಥಳಾಂತರ:
    ಚಿರತೆಯನ್ನು ವಲಯ ಅರಣ್ಯಾಧಿಕಾರಿ ಜಿತೇಂದ್ರಕುಮಾರ್ ಸೂಚನೆ ಮೇರೆಗೆ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಲಯನ್ ಸಫಾರಿಗೆ ಕಳಿಸಿಕೊಡಲಾಗುವುದು ಎಂದು ಡಿಆರ್‌ಎಫ್ ಮೈಲಾರಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts