More

    ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಮೋದಿ ನಾಯಕತ್ವ ಅಗತ್ಯ: ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಹೇಳಿಕೆ

    ರಾಮನಗರ: ದೇಶದ ಪ್ರತಿಯೊಬ್ಬ ಪ್ರಜೆಯೂ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬೆಂಬಲಿಸಿ ’ಆತ್ಮ ನಿರ್ಭರ ಭಾರತ’ ನಿರ್ಮಾಣಕ್ಕೆ ಸಹಕರಿಸಬೇಕೆಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ನಗರದ ರಾಯರದೊಡ್ಡಿ ವೃತ್ತದಲ್ಲಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು ತಿಳಿಸುವ ಕರಪತ್ರಗಳನ್ನು ಸಾರ್ವಜನಿಕರಿಗೆ ಬುಧವಾರ ವಿತರಿಸಿ ಮಾತನಾಡಿದರು. ಸ್ವಾವಲಂಬಿ, ಸಧೃಢ ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರ ನಾಯಕತ್ವ ಅತ್ಯಗತ್ಯವಾಗಿದೆ. ಕಳೆದ ಒಂದು ವರ್ಷದಲ್ಲಿ ಅವರ ಜನಪರ ಕಾರ್ಯಕ್ರಮಗಳು ಮತ್ತು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕೆಂಬ ಉದ್ದೇಶ ಸಾಕಾರಗೊಂಡಿದೆ ಎಂದರು.

    ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನದಲ್ಲಿ ಮೋದಿ ಸಾಗುತ್ತಿದ್ದಾರೆ. ಅಲ್ಲದೆ ಬಹುಮುಖ್ಯವಾಗಿ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಅದರ ಸದ್ಭಳಕೆ ಸಹ ಸಮರ್ಪಕವಾಗಿ ಪಾರದರ್ಶಕವಾಗಿ ನಡೆಯುತ್ತಿದೆ. 2ನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಮುಗಿಸಿರುವ ಮೋದಿ ಸರ್ಕಾರ ಮಹತ್ತರ ಸವಾಲುಗಳನ್ನು ಎದುರಿಸಿ ಎರಡನೇ ವರ್ಷಕ್ಕೆ ಯಶಸ್ವಿಯಾಗಿದೆ ಸಾಗಿದೆ ಎಂದು ವಿಶ್ಲೇಷಿಸಿದರು.

    ಐತಿಹಾಸಿಕ ನಿರ್ಧಾರಗಳಾದ ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ವಿಧೇಯಕ 2019, ರಾಮಮಂದಿರ ನಿರ್ಮಾಣಕ್ಕೆ ಓಂಕಾರ, ತ್ರಿವಳಿ ತಲಾಖ್, ಕರ್ತಾರ್‌ಪುರ್ ಕಾರಿಡಾರ್ ಯೋಜನೆ, ಬ್ರೂ-ರಿಯಾಂಗ್ ಒಪ್ಪಂದ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಮೊದಲ ಸೇನಾ ಮುಖ್ಯಸ್ಥರ ನೇಮಕ, ಅಪಾಚೆ ಕಾಂಬ್ಯಾಟ್ ಹೆಲಿಕಾಪ್ಟರ್, ರೇಲ್ ಏರ್‌ಕ್ರ್‌ಟಾ ಇನ್ನಿತರ ಸಾಧನೆಗಳಿರುವ ಕರಪತ್ರಗಳನ್ನು ವಿವೇಕಾನಂದ ನಗರ, ಕೆಂಪೇಗೌಡ ಸರ್ಕಲ್ ಬಳಿ ಮನೆಮನೆಗೆ ತೆರಳಿ ವಿತರಿಸಿದರು.

    ತಾಲೂಕು ಬಿಜೆಪಿ ಅಧ್ಯಕ್ಷ ಪ್ರವೀಣ್‌ಗೌಡ, ನಗರ ಘಟಕದ ಅಧ್ಯಕ್ಷ ಮಂಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ನಿರ್ದೇಶಕ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts