More

    ಸರ್ವಜ್ಞ ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ 4ನೇ ಸ್ಥಾನ

    ಪ್ರವೀಣ ಹಿರಗೋಪನರ್ ಸಾಧನೆ | 192 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಸರ್ವಜ್ಞ ಶಿಕ್ಷಣ ಸಂಸ್ಥೆಯ ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನ ವಿದ್ಯಾರ್ಥಿ ಪ್ರವೀಣ ಹಿರಗೋಪನರ್ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ೫೯೫ ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೪ನೇ ಸ್ಥಾನ ಪಡೆದಿದ್ದು, ವಿಭಾಗ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ.
    ೧೯೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ೨೦೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ಮರೆಮ್ಮ ಕರಗೊಂಡ ಶೇ.೯೭.೩೩ ಮತ್ತು ಪಿಸಿಎಂನಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದಿದ್ದಾಳೆ. ಸುಮೀತ್ ಎನ್ ಶೇ.೯೭.೧೭ ಪಡೆದು ಕಾಲೇಜಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
    ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲರ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗಿದೆ. ಎಂದು ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ್, ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರಡ್ಡಿ ಪಾಟೀಲ್, ಪ್ರಾಚಾರ್ಯ ಎಂ.ಸಿ.ಕಿರದಳ್ಳಿ, ವಿನುತಾ ಆರ್.ಬಿ., ಉಪಪ್ರಾಚಾರ್ಯರಾದ ಪ್ರಶಾಂತ ಕುಲಕರ್ಣಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಹಾಗೂ ಬೋಧಕ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    ಸರ್ವಜ್ಞ ಕಾಲೇಜಿನಲ್ಲಿ ನಿರಂತರ ನೋಟ್ಸ್. ವಿಶೇಷವಾಗಿ ಬಹು ಆಯ್ಕೆ ಪ್ರಶ್ನೆಗಳಿಗೆ ಐಐಟಿಯನ್ ಅಭಿಷೇಕ ರಡ್ಡಿ ಅವರು ರೂಪಿಸಿರುವ ವಿಶೇಷ ನೋಟ್ಸ್ ಅನುಕೂಲವಾಗಿದೆ. ನಿರಂತರ ಪರೀಕ್ಷೆ ನಡೆಸಿ, ಕ್ಯಾಶಪ್ರೆÊಸ್ ನೀಡುತ್ತಿದ್ದರು. ಕಾಲೇಜಿನಲ್ಲೇ ರಾತ್ರಿ ೧೦ಗಂಟೆವರೆಗೆ ಅಧ್ಯಯನಕ್ಕೆ ಅವಕಾಶವಿತ್ತು. ಉಪನ್ಯಾಸಕರು ಇರುತ್ತಿದ್ದರು. ಆದ್ದರಿಂದ ರಾಜ್ಯಮಟ್ಟದ ರ‍್ಯಾಂಕ್ ಪಡೆಯಲು ಸಹಕಾರಿಯಾಗಿದೆ.
    | ಪ್ರವೀಣ ಹಿರಗೋಪನರ್
    ರಾಜ್ಯ ಮಟ್ಟಕ್ಕೆ ೪ನೇ ಟಾಪರ್
    ಸರ್ವಜ್ಞ ಪಿಯು ಕಾಲೇಜು


    ಸರ್ವಜ್ಞ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಗ್ರ ಅಧ್ಯಯನಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಗುರಿಯಾಗಿಟ್ಟುಕೊಂಡು ಬೋಧನೆ ಮಾಡುತ್ತಿದ್ದು, ಆತ್ಮಸ್ಥೆÊರ್ಯ ತುಂಬಿ ಗ್ರಾಮೀಣ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ರೂಪಿಸಲಾಗುತ್ತಿದೆ. ನೂತನ ಬೋಧನಾ ಶೈಲಿ, ವ್ಯಕ್ತಿತ್ವ ವಿಕಸನದಿಂದ ಅಧ್ಯಯನಕ್ಕೆ ಪ್ರೇರಣೆ ನೀಡಿದ್ದರಿಂದ ಅತ್ಯುತ್ತಮ ಫಲಿತಾಂಶ ಬಂದಿದೆ.
    | ಅಭಿಷೇಕ ಚನ್ನಾರಡ್ಡಿ ಪಾಟೀಲ್ ನಿರ್ದೇಶಕ
    ಸರ್ವಜ್ಞ ಪದವಿ ಪೂರ್ವ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts