More

    ಎಲ್ಲವನ್ನೂ ಅರಿತ ಮಹಾಜ್ಞಾನಿ ಸರ್ವಜ್ಞ

    ಕಿಕ್ಕೇರಿ: ವಚನಗಳು ಜನಸಾಮಾನ್ಯರ ಬದುಕಿನ ಭಾಗವಾಗಿದ್ದು, ಅರಿತು ಬಾಳಿದರೆ ಸ್ವರ್ಗ ಸುಖವೆಂದು ಸ್ಪಂದನ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ತಿಳಿಸಿದರು.
    ಪಟ್ಟಣದಲ್ಲಿ ಸ್ಪಂದನ ಫೌಂಡೇಷನ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಷ್ಪದತ್ತ ಸರ್ವಜ್ಞನ ನಿಜನಾಮವಾಗಿದೆ. 17ನೇ ಶತಮಾನದಲ್ಲಿ ಹಾವೇರಿ ಜಿಲ್ಲೆಯಲ್ಲಿ ಜನಿಸಿದ ಸರ್ವಜ್ಞ ತಮ್ಮ ಬದುಕಿನಲ್ಲಿ ಕಂಡ ಸಾರವನ್ನು ತ್ರಿಪದಿಗಳ ಮೂಲಕ ಸರಳವಾಗಿ ನಾಡಿಗೆ ತಿಳಿಸಿದರು ಎಂದರು.
    ಸಾಮಾಜಿಕ, ಧಾರ್ಮಿಕ ವಿಷಯಗಳ ಸಮಗ್ರ ಹೂರಣವಾದ ಸರ್ವಜ್ಞನ ವಚನಗಳನ್ನು ಬಾಲ್ಯದಲ್ಲಿಯೇ ಓದಿ ತಿಳಿದುಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಊರೂರು ಸುತ್ತಿ, ಜಗತ್ತಿನ ಆಗುಹೋಗುಗಳನ್ನು ಅರಿತ ಸರ್ವಜ್ಞ, ಬದುಕಿನ ಸಾರವನ್ನು ತ್ರಿಪದಿಗಳ ಮೂಲಕ ಜಗತ್ತಿಗೆ ಸಾರಿದರು. ಅಂದು ಹಿಂದಿನಂತೆ ಓದು, ಜ್ಞಾನಕ್ಕೆ ಯಾವುದೇ ಪೂರಕ ಸೌಲಭ್ಯ ಇಲ್ಲವಾದರೂ ದೇಶಪರ್ಯಟನೆ ಮೂಲಕ ಜಗತ್ತಿನ ಒಳಿತು, ಕೆಡುಕನ್ನು ಅರಿತು ನೆನಪಿನ ಬುತ್ತಿಯಲ್ಲಿ ಸಂಗ್ರಹಿಸಿಕೊಂಡಿದ್ದರು. ಯುವಕರು ಸರ್ವಜ್ಞನ ಬದುಕು ಬರಹವನ್ನು ಕಿಂಚಿತ್ತಾದರೂ ಅರಿತುಕೊಳ್ಳಬೇಕು. ವಚನಗಳನ್ನು ಓದುವ ಹವ್ಯಾಸ ಅಳವಡಿಸಿಕೊಂಡಲ್ಲಿ ಮನಸ್ಸಿನಲ್ಲಿ ಕ್ಲೇಶಗಳು ದೂರವಾಗಲಿವೆ ಎಂದು ನುಡಿದರು. ಮಕ್ಕಳು ಸರ್ವಜ್ಞನ ಹಲವು ವಚನಗಳನ್ನು ವಾಚಿಸಿದರು. ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಮಾಜ ಸೇವಾಕರ್ತರಾದ ಕವಿತಾ, ಶಾರದಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts