More

    ಸರ್ಕಾರಿ ಕಾರ್ನರ್: ಮೃತ ನೌಕರನ ಮಕ್ಕಳಿಗೆ ಅನುಕಂಪದ ನೇಮಕ

    ದಿನದ ಪ್ರಶ್ನೆ

    ನಮ್ಮ ತಂದೆಯವರು 2022ರ ಜು.31ರಂದು ಸರ್ಕಾರಿ ಕೆಲಸದಿಂದ ನಿವೃತ್ತರಾಗಿ ಅಂದೇ ರಾತ್ರಿ 10 ಗಂಟೆಗೆ ಹೃದಯಾಘಾತದಿಂದ ನಿಧನರಾದರು. ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡಬೇಕೆಂದು ನಾನು ಅರ್ಜಿ ಸಲ್ಲಿಸಿದ್ದೆ. ನಿಮ್ಮ ತಂದೆಯವರನ್ನು ಕಾರ್ಯನಿವೃತ್ತಿಗೊಳಿಸಿರುವುದರಿಂದ ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡಲು ಸಾಧ್ಯವಿಲ್ಲವೆಂದು ನನ್ನ ಮನವಿ ತಿರಸ್ಕರಿಸುತ್ತಾರೆ. ಇದಕ್ಕೆ ಪರಿಹಾರವಿದೆಯೇ?

    | ದ್ವಾರಕನಾಥ್ ಕೊಪ್ಪಳ

    ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರರನ್ನು 24 ಗಂಟೆಯೂ ನೌಕರನಾಗಿರುತ್ತಾನೆ. ಈ ನಿಯಮಾವಳಿಯ ನಿಯಮ 8(24) ರೀತ್ಯಾ ದಿನದ ಪರಿಭಾಷೆಯನ್ನು ತಿಳಿಸಿದ್ದು ಅದರಂತೆ ರಾತ್ರಿ 11 ಗಂಟೆ 59 ನಿಮಿಷದವರೆಗೂ ಸರ್ಕಾರಿ ನೌಕರನಾಗಿರುತ್ತಾನೆ. ಸಂಜೆ 5.30ಕ್ಕೆ ನಿವೃತ್ತನಾಗಿದ್ದರೂ ಅವನು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಪ್ರಕರಣದಂತೆ ಅವನ ಕುಟಂಬಕ್ಕೆ ಎಲ್ಲ ಸೇವಾ ಸೌಲಭ್ಯ ಮತ್ತು ಅನುಕಂಪ ಆಧಾರದ ಮೇಲೆ ನೇಮಕಾತಿ ಹಕ್ಕು ಇರುತ್ತದೆ. ಈ ದೃಷ್ಟಿಯಿಂದ ನೀವು 1996ರ ಅನುಕಂಪ ಆಧಾರದ ನೇಮಕಾತಿ ನಿಯಮಗಳ ಪ್ರಕಾರ ನೇಮಕಾತಿ ಹೊಂದಲು ಅರ್ಹರಾಗಿರುತ್ತೀರಿ. ನೇಮಕಾತಿ ಪ್ರಾಧಿಕಾರವು ನಿಮ್ಮ ಅರ್ಜಿ ತಿರಸ್ಕಾರ ಮಾಡಿರುವುದು ನಿಯಮಾವಳಿಗೆ ವ್ಯತಿರಿಕ್ತವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ( ಅನುಕಂಪ ಆಧಾರದ ಮೇಲೆ ನೇಮಕಾತಿ) ನಿಯಮಗಳು’ ಪುಸ್ತಕ ನೋಡಬಹುದು.

    ಸರ್ಕಾರಿ ಕಾರ್ನರ್: ಮೃತ ನೌಕರನ ಮಕ್ಕಳಿಗೆ ಅನುಕಂಪದ ನೇಮಕ

    ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

    ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts