More

    ಶಿರಪುರ ಮಾದರಿ ರಾಜ್ಯಕ್ಕೆ ವಿಸ್ತರಿಸಲಿ

    ಆಳಂದ: ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಅವರ ಕನಸಿನ ಯೋಜನೆಯಾದ ಶಿರಪುರ ಮಾದರಿ ನೀರಾವರಿ ಪ್ರಾಜೆಕ್ಱ್​ನಿಂದ ಆಳಂದನಲ್ಲಿ ಜಲ ಸಮಸ್ಯೆ ದೂರವಾಗಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸುವ ಕೆಲಸ ಆಗಲಿ ಎಂದು ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಸರಸಂಬಾದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್, ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್‌ಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಿ.ಆರ್.ಪಾಟೀಲ್ ಅವರು ರೈತ ಕುಟುಂಬದಲ್ಲಿ ಜನಿಸಿ, ಜನರ ಸಮಸ್ಯೆಗಾಗಿ ಸ್ಪಂದಿಸುವ ಶ್ರೇಷ್ಠ ನಾಯಕರಾಗಿದ್ದಾರೆ. ರೈತರಿಗೆ ಸಮಸ್ಯೆಯಾದಾಗ ದೆಹಲಿಗೆ ಹೋಗಿ ಪ್ರತಿಭಟಿಸಿದ ಕ್ಷೇತ್ರದ ಏಕೈಕ ರಾಜಕಾರಣಿ ಎಂದು ಬಣ್ಣಿಸಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಆರ್.ಪಾಟೀಲ್, ಈಗಾಗಲೇ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ರಾಜಕಾರಣ ಮಾಡಿ, ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಇದೀಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್‌ನಿಂದ ಸ್ಪರ್ಧಿಸುವ ಆಸೆ ಇದೆ. ಪಕ್ಷ ಟಿಕೆಟ್ ನೀಡಿದರೆ ಅಖಾಡಕ್ಕೆ ಇಳಿಯುವೆ ಎಂದು ಹೇಳಿದರು.

    ಹತ್ತಿಕಣಮಸದ ಶ್ರೀ ಪ್ರಭುಶಾಂತ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಸದಸ್ಯ ಗುರುಶರಣ ಪಾಟೀಲ್, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಪಿಯು ಡಿಡಿ ಶಿವರಶಣಪ್ಪ ಮುಳೆಗಾಂವ್, ಪ್ರಮುಖರಾದ ಡಾ. ಪ್ರಭು ಖಾನಾಪುರೆ, ಡಾ.ಪಂಡಿತ ಕೊನ್ನಳಿ, ಸಾತಲಿಂಗಪ್ಪ ಪಾಟೀಲ್, ರಾಜಶೇಖರ ಪಾಟೀಲ್, ಮೋಹನಗೌಡ ಪಾಟೀಲ್, ಬಾಬು ಗೊಬ್ಬೂರ, ಅನಂತರಾಜ ಸಾಹು, ಜಗನ್ನಾಥ ದೇಶಮುಖ, ಈರಣ್ಣ ಹೊನ್ನಶಟ್ಟಿ, ಪಂಡಿತ ಜಿಡಗೆ, ಪಂಡಿತ ಖಾನಾಪುರೆ, ವಿಜಯಾನಂದ ಕುಂಬಾರ, ಮಹಾದೇವ ಖಾನಾಪುರೆ, ಮಲ್ಲಿನಾಥ ಹಳ್ಳೆ, ಹುಸೇನ್ ಮುಜಾವರ್, ಬಸವರಾಜ ಖವಾ, ಸುರೇಶ ಭಕರೆ, ಮಲ್ಲಿನಾಥ ಪಾಟೀಲ್, ಮಾಣಿಕ ಪೈಲ್ವಾನ್ ಇತರರಿದ್ದರು.

    ಗ್ರಾಮಸ್ಥರು ಶಾಸಕ ಬಿ.ಆರ್.ಪಾಟೀಲ್ ಹಾಗೂ ಆರ್.ಕೆ.ಪಾಟೀಲ್ ಅವರಿಗೆ ನೇಗಿಲು ನೀಡಿ ಸನ್ಮಾನಿಸಿದರು. ಪ್ರಥ್ವಿರಾಜ ಮೂಲಗೆ ಸ್ವಾಗತಿಸಿದರು. ರಮೇಶ ಖಾನಾಪುರೆ ನಿರೂಪಣೆ ಮಾಡಿದರು. ಶಿವಾನಂದ ಭಕರೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts