More

    ಕನ್ನಡಿಯಿಂದ ಕ್ಯಾಮೆರಾ ಎದುರು…

    ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಸೇಂಟ್ ಮಾರ್ಕ್ಸ್ ರಸ್ತೆ’ ಸಿನಿಮಾ ಕನ್ನಡದ ಜತೆಗೆ ತಮಿಳಿನಲ್ಲೂ ಸಿದ್ಧವಾಗಿದೆ. ಈ ಚಿತ್ರದ ಮೂಲಕ ಸಾರಾ ವೆಂಕಟೇಶ್ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಚೆನ್ನೈ ಮೂಲದ ಮಗೆಶ್ ಮತ್ತು ವೆಂಕಟೇಶ್ ಒಟ್ಟಿಗೆ ಸೇರಿ ನಿರ್ದೇಶಿಸಿರುವ ಈ ಚಿತ್ರ, ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಸಿನಿಮಾದ ಅನುಭವವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ ಸಾರಾ,
    ‘ಮನೆಯಲ್ಲಿ ಇಂಡಸ್ಟ್ರಿ ಸರಿಯಿಲ್ಲ, ಸಿನಿಮಾ ಬೇಡ ಎಂದಿದ್ದರು. ಒಳ್ಳೇ ಸಿನಿಮಾ ಅವಕಾಶ ಸಿಕ್ಕರಷ್ಟೇ ನಟಿಸುತ್ತೇನೆ ಎಂದಿದ್ದೆ. ಅದರಂತೆ ಮೊದಮೊದಲು ಬೋಲ್ಡ್ ರೀತಿಯ ಸಿನಿಮಾ ಅವಕಾಶಗಳು ಬಂದವು. ಅವೆಲ್ಲವನ್ನು ಕೈ ಬಿಟ್ಟೆ. ಅದಾದ ಮೇಲೆ ‘ಸೇಂಟ್ ಮಾರ್ಕ್ಸ್ ರಸ್ತೆ’ ಸಿನಿಮಾ ಸಿಕ್ಕಿತು’ ಎಂದು ಚೊಚ್ಚಲ ಸಿನಿಮಾದ ಖುಷಿಯನ್ನು ಹೇಳಿಕೊಳ್ಳುತ್ತಾರೆ ಸಾರಾ ವೆಂಕಟೇಶ್.

    ತಮಿಳಿನ ಒಂದು ಕಥೆ ಅಂತಿಮ ಹಂತದಲ್ಲಿದೆ. ತೆಲುಗಿನಿಂದಲೂ ಅವಕಾಶಗಳು ಬರುತ್ತಿವೆ. ಕನ್ನಡದಲ್ಲಿ ಅವಕಾಶ ಸಿಕ್ಕರೆ, ಅದಕ್ಕೆ ಮೊದಲ ಪ್ರಾಶಸ್ಱ. ಇನ್ನು ಸುದೀಪ್ ಮತ್ತು ದರ್ಶನ್ ಜತೆ ಒಂದು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೂ ಐ ಆಮ್ ಹ್ಯಾಪಿ …
    | ಸಾರಾ ವೆಂಕಟೇಶ್ ನಟಿ

    ‘ಪ್ರತಿಯೊಬ್ಬರಿಗೂ ಅವರ ಚೊಚ್ಚಲ ಸಿನಿಮಾವನ್ನು ಬಿಗ್ ಪರದೆ ಮೇಲೆ ನೋಡಬೇಕೆಂಬ ಆಸೆ ಇರುತ್ತದೆ. ನನಗೂ ಸಹ ಅದೇ ಆಸೆ. ಆದರೆ, ಈಗ ಓಟಿಟಿನೇ ಬೆಸ್ಟ್ ಅನಿಸುತ್ತಿದೆ’ ಎನ್ನುವ ಸಾರಾ, ‘ಸೇಂಟ್ ಮಾರ್ಕ್ಸ್ ರಸ್ತೆ’ ಸಿನಿಮಾದಲ್ಲಿ ಸೆಲ್ಪಿ ಕ್ರೇಜ್ ಇರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದಿದೆ. ನೈಜ ಘಟನೆ ಆಧರಿತ ಸಿನಿಮಾ ಇದು. ಮೊದಲ ಸಿನಿಮಾದಲ್ಲಿಯೇ ಪ್ರಿಯಾಂಕಾ ಉಪೇಂದ್ರ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಮತ್ತೊಂದು ಖುಷಿಯ ವಿಚಾರ’ ಎನ್ನುತ್ತಾರೆ ಸಾರಾ.

    ಇದನ್ನೂ ಓದಿ: 31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ
    ಇನ್ನು ನಟನೆ ಬಗ್ಗೆ ಎಲ್ಲಿಯೂ ತರಬೇತಿ ಪಡೆದುಕೊಳ್ಳದ ಸಾರಾ, ಚಿಕ್ಕಂದಿನಿಂದ ಕನ್ನಡಿ ಮುಂದೆ ನಿಂತುಕೊಂಡೇ ರಿಹರ್ಸಲ್ ಮಾಡಿದ್ದಾರಂತೆ. ‘ಚಿಕ್ಕವಳಿದ್ದಾಗ ಅಮ್ಮ ಹೊಡೆದರೆ, ಗದರಿಸಿದರೆ, ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ. ನನ್ನನ್ನು ನಾನೇ ಗುರಾಯಿಸುತ್ತಿದ್ದೆ. ನಿಧಾನಕ್ಕೆ ಕನ್ನಡ ನಟಿಯರಂತೆ ನಟಿಸಲು ಶುರುಮಾಡಿದೆ’ ಎಂದು ಹೇಳಿಕೊಳ್ಳುತ್ತಾರೆ.

    ಸೂಟ್​​ಕೇಸ್​ನಲ್ಲಿತ್ತು ಪೀಸ್​ ಪೀಸ್ ಆಗಿರುವ ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts