More

    VIDEO| ಕನ್ನಡಕ ಹಾಕಿಕೊಂಡಿರೋ ಈ ಸ್ಥೂಲಕಾಯ ಯುವತಿ ಈಗ ಬಾಲಿವುಡ್​ ಮೋಸ್ಟ್ ಹಾಟ್​ ಆ್ಯಂಡ್​ ಬ್ಯೂಟಿಫುಲ್​ ಬೆಡಗಿ!​

    ಮುಂಬೈ: ಬಾಲಿವುಡ್​ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಮಿಂಚುತ್ತಿರುವ ಸಾರಾ ಅಲಿ ಖಾನ್​ ತಾವೂ ಚಿತ್ರರಂಗಕ್ಕೆ ಬರುವ ಮುನ್ನಾ ಭಾರಿ ತೂಕ ಹೊಂದಿದ್ದರು ಎಂಬುದಕ್ಕೆ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋವೊಂದು ಸಾಕ್ಷಿಯಾಗಿದೆ. ಸದ್ಯ ಗ್ಲಾಮರಸ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಾಟ್​ ಬ್ಯೂಟಿ ಈ ಮುಂಚೆ ಇದ್ದ ತೂಕವನ್ನು ಇಳಿಸಿಕೊಂಡಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡುವಂತಿದೆ.

    24 ವರ್ಷದ ಸಾರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಂಗಳವಾರ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ತನ್ನ ಭಾರದ ದೇಹದ ಬಗ್ಗೆ ತಲೆ ಕೆಡೆಸಿಕೊಳ್ಳದೇ ಗೆಳತಿಯರೊಡನೆ ವಿಮಾನದಲ್ಲಿ ತುಂಟಾಟ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸಾರಾರನ್ನು ಗುರುತು ಹಿಡಿಯಲಾಗದಷ್ಟು ದಪ್ಪವಾಗಿದ್ದಾರೆ. ತಮ್ಮ ದೇಹ ಇಳಿಕೆಗೆ ಜಿಮ್​ನಲ್ಲಿ ಸಾಕಷ್ಟು ಬೆವರು ಹರಿಸಿರುವ ಸಾರಾ ಅದರ ಕ್ರೆಡಿಟ್​ ಅನ್ನು ಟ್ರೈನರ್​ ನಮ್ರಾತಾ ಪುರೋಹಿತ್​ ಅವರಿಗೆ ನೀಡಿದ್ದಾರೆ.

    ಈ ಹಿಂದೆ ತಾಯಿ ಅಮೃತ ಸಿಂಗ್​ ಜತೆಯಲ್ಲಿ ತೆಗೆದುಕೊಂಡಿರುವ ಫೋಟೋವನ್ನು ಸಾರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು. ‘ನನ್ನನ್ನು ಎಸೆಯಲು ಸಾಧ್ಯವಾಗದಿದ್ದಾಗ’ ಎಂದು ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡು, ಕಪ್ಪು ಬಣ್ಣದ ಸೌಂದರ್ಯ ಎಂದು ಬರೆದುಕೊಂಡಿದ್ದರು. ಇದಕ್ಕೆ ಲವ್​ ಆಜ್​ ಕಲ್​ ಚಿತ್ರದ ಸಹನಟ ಹಾಗೂ ಬಾಯ್​ಫ್ರೆಂಡ್ ಎಂದು ಸುದ್ದಿಯಾಗಿದ್ದ ಕಾರ್ತಿಕ್​ ಆರ್ಯನ್, ಈ ಹುಡುಗಿ ಸೋಡಲು ಸಾರಾ ಅಲಿ ರೀತಿ ಇದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದರು.

    ಬಾಲಿವುಡ್​ ಪ್ರವೇಶಿಸುವ ಮುನ್ನ ಸಾರಾ ಅಂದಾಜು 96 ಕೆ.ಜಿ. ಇದ್ದರಂತೆ. ನಟ ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ ಕೇದರ್​ನಾಥ್​ ಚಿತ್ರದ ಮೂಲಕ ಸಾರಾ ಚಿತ್ರರಂಗ ಪ್ರವೇಶ ಮಾಡಿದರು. ಸಾರಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಕಾಯಿಲೆಯ ವಿರುದ್ಧ ಹೋರಾಟ ನಡೆಸಿದ್ದರ ಬಗ್ಗೆ ಬಿಬಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ನಾನು ನಾಲ್ಕು ವರ್ಷ ಅಧ್ಯಯನಕ್ಕೆಂದು ಕೊಲಂಬಿಯಾಕ್ಕೆ ಹೋಗಿದ್ದೆ. ಎರಡು ವರ್ಷದ ನಂತರ ನಾನು ನಟನೆ ಮಾಡಲು ನಿರ್ಧರಿಸಿದ್ದೆ. ಆದರೆ, ನನ್ನ ತೂಕ ನೋಡಿದಾಗ ನಾನು 96 ಕೆ.ಜಿ ಇರುವುದು ತಿಳಿಯಿತು. ಇದರಿಂದ ತುಂಬಾ ಕಷ್ಟವಾಯಿತು. ಕೊನೆಯ ವರ್ಷದ ಅಧ್ಯಯನ ವೇಳೆ ನಾನು ತೂಕವನ್ನು ಕಳೆದುಕೊಂಡೆ. ಈ ವೇಳೆ ತುಂಬಾ ಶ್ರಮವಹಿಸಿದೆ ಎಂದು ಹೇಳಿಕೊಂಡಿದ್ದರು.

    ಸಾರಾ ಅಲಿ ಖಾನ್​, ನಟ ಸೈಫ್​ ಅಲಿಖಾನ್​ ಅವರ ಮೊದಲ ಪತ್ನಿ ಅಮೃತ ಸಿಂಗ್​ ಮಗಳಾಗಿದ್ದು, ತಂದೆ ಸೈಫ್​ ಜತೆಯಲ್ಲಿಯೂ ಸಂಪರ್ಕದಲ್ಲಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಲವ್​ ಆಜ್​ ಕಲ್ ಸೀಕ್ವೆಲ್​ ಚಿತ್ರವನ್ನು ಸಾರಾ ಮುಗಿಸಿದ್ದು, ವರುಣ್​ ಧವನ್​ ಅಭಿನಯದ ಕೂಲಿ ನಂ.1 ಚಿತ್ರದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts