More

    ಸಪ್ತಕೋಟಿ ಮಂತ್ರಗಳಲ್ಲಿ ಶಿವಮಂತ್ರವೇ ಶ್ರೇಷ್ಠ

    ಸಂಕೇಶ್ವರ: ಸಮೀಪದ ನಿಡಸೋಸಿಯಲ್ಲಿ ರೈತರು, ಸೈನಿಕರಿಗಾಗಿ ಹಾಗೂ ಮಹಾಮಾರಿ ಕರೊನಾ ವೈರಸ್ ಮುಕ್ತ ಮಾಡಲು ದುರದುಂಡೀಶ್ವರ ಕರ್ತೃ ಗದ್ದುಗೆಗೆ 11 ದಿನಗಳಿಂದ ನಡೆದ ಏಕಾದಶ ರುದ್ರಾಭಿಷೇಕ ಶನಿವಾರ ಸಂಪನ್ನಗೊಂಡಿತು.

    ಪೀಠಾಧಿಪತಿ, ತ್ರಿವಿಧ ದಾಸೋಹಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಪ್ಪಣೆಯಂತೆ ಶ್ರೀಮಠದಲ್ಲಿ ಏಕಾದಶ ರುದ್ರಾಭಿಷೇಕ ನೆರವೇರಿತು. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸಪ್ತ ಕೋಟಿ ಮಂತ್ರಗಳಲ್ಲಿ ಶಿವಮಂತ್ರವೇ ಶ್ರೇಷ್ಠ. ಎಲ್ಲ ಕಡೆಯೂ ಎಂದಿಗೂ ಶ್ರೇಷ್ಠ. ಆದರೆ, ಭಕ್ತಿಯಲ್ಲಿ ನಂಬಿಕೆ ಇರಬೇಕಾದದ್ದು ತುಂಬ ಮುಖ್ಯ ಎಂದರು. ಪುರೋಹಿತರಾದ ಗುರುಲಿಂಗಯ್ಯ ಹಿರೇಮಠ, ಜಗದೀಶ ಶಾಸ್ತ್ರಿ, ರಾಚಯ್ಯ ಶಾಸ್ತ್ರಿ, ಮಲ್ಲಯ್ಯ ಕಾಡದೇವರಮಠ, ಸುನೀಲ ಹಿರೇಮಠ, ಮಲ್ಲಕಯ್ಯ ಹಿರೇಮಠ, ಮಹಾಂತೇಶ ಮಠದ, ಮಲ್ಲಿಕಾರ್ಜುನ, ಸೋಮನಾಥ, ಪ್ರಣವ ಅವರು ರುದ್ರಾಭಿಷೇಕದ ವಿಧಿವಿಧಾನ ನಡೆಸಿಕೊಟ್ಟರು. ಗ್ರಾಮದ ಗಜಾನನ ಬಾಡ, ಮಹಾನಿಂಗ ಕುಂಬಾರ, ರಾಯಪ್ಪ ನಿಂಗನೂರಿ, ಮಲ್ಲಣ್ಣ ತನೋಡಿ ಹಾಗೂ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts