More

    ಸ್ಯಾಂಟ್ರೋ ರವಿ ಬಂಧನ: ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರ ರಣಬೇಟೆ

    ಬೆಂಗಳೂರು: 11 ದಿನಗಳ ಬಳಿಕ ಕೊನೆಗೂ ಸ್ಯಾಂಟ್ರೋ ರವಿ ಅಲಿಯಾಸ್​ ಮಂಜುನಾಥ್​ನನ್ನು ಪೊಲೀಸರು ಬಂಧಿಸಿದ್ದಾರೆ.

    ಪತ್ನಿಗೆ ಕಿರುಕುಳ, ಮಹಿಳೆ ಮೇಲೆ ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ, ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆ… ಹೀಗೆ ಹಲವು ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಈತನ ಬಂಧನಕ್ಕೆ ಕರ್ನಾಟಕ ಪೊಲೀಸರು ವಿಶೇಷ ತಂಡ ರಚಿಸಿ 9 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಕೊನೆಗೂ ಇಂದು(ಶುಕ್ರವಾರ) ಗುಜರಾತ್​ನಲ್ಲಿ ಪೊಲೀಸರ ಕೈಗೆ ಸ್ಯಾಂಟ್ರೋ ರವಿ ಸಿಕ್ಕಿಬಿದ್ದಿದ್ದಾನೆ.

    ಸ್ಯಾಂಟ್ರೋ ರವಿ ವಿರುದ್ಧ ಈತನ ಪತ್ನಿಯೇ ಮೈಸೂರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಮಾಧ್ಯಮಗಳಲ್ಲಿ ಸ್ಯಾಂಟ್ರೋ ರವಿಯ ಒಂದೊಂದೇ ಕರಾಳ ಮುಖ ಪ್ರಸಾರವಾಗುತ್ತಿದ್ದಂತೆ ಸ್ಯಾಂಟ್ರೋ ರವಿಯ ಬಂಧನಕ್ಕೆ ಸಾರ್ವಜನಿಕ ವಲಯದಲ್ಲೂ ಆಗ್ರಹ ಕೇಳಿಬಂದಿತ್ತು.

    ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈತನ ಹಿನ್ನೆಲೆ ಬಗೆದಷ್ಟು ಆಳ ಎಂಬಂತಿದ್ದು, ಒಂದೊಂದೇ ಕರಾಳ ವಿಚಾರ ಬಯಲಾಗುತ್ತಲೇ ಇದೆ. ಸ್ಯಾಂಟ್ರೋ ರವಿ ಕೇವಲ ಪಿಂಪ್ ಮಾತ್ರವಲ್ಲ, ಕಾರು ಕಳ್ಳ ಕೂಡ. ವರ್ಗಾವಣೆ ದಂಧೆಯ ಕಿಂಗ್​ಪಿನ್ ಆಗಿರುವ ಸ್ಯಾಂಟ್ರೋ ರವಿ ಬಳಿ ಈಗಾಗಲೇ ಸಚಿವರ ಲೆಟರ್​ಹೆಡ್​ಗಳು ಪತ್ತೆಯಾಗಿವೆ. ಇನ್​ಸ್ಪೆಕ್ಟರ್, ಎಸಿಪಿ, ಡಿವೈಎಸ್ಪಿಗಳಿಗೆ ಪ್ರಮೋಷನ್- ವರ್ಗಾವಣೆಯಲ್ಲಿ ಈತನೇ ಮಾಸ್ಟರ್​ ಅಂತೆ. ವರ್ಗಾವಣೆ ದಂಧೆಯಲ್ಲಿ ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದ. ಇದರಲ್ಲಿ ಹಲವು ಸಚಿವರು-ಶಾಸಕರು ಈತನ ಜತೆ ಶಾಮೀಲಾಗಿದ್ದರು ಎನ್ನಲಾಗಿದೆ.

    ಈತನ ಹುಟ್ಟೂರು ಮಂಡ್ಯ. ನಿಜವಾದ ಹೆಸರು ಮಂಜುನಾಥ. ಆರಂಭದಲ್ಲಿ ಕಳ್ಳತನಕ್ಕಿಳಿದಿದ್ದ ಮಂಜುನಾಥ, ನಂತರದಲ್ಲಿ ಅಪಹರಣ ಮತ್ತು ವೇಶ್ಯಾವಾಟಿಕೆ ದಂಧೆಗೆ ಇಳಿದಿದ್ದ. ಹಲವು ಬಾರಿ ಈತ ಜೈಲಿಗೂ ಹೋಗಿ ಬಂದಿದ್ದಾನೆ. ತನ್ನ ಕೃತ್ಯಕ್ಕೆ ಸ್ಯಾಂಟ್ರೋ ಕಾರನ್ನೇ ಬಳಸುತ್ತಿದ್ದರಿಂದ ಈತನಿಗೆ ಸ್ಯಾಂಟ್ರೋ ರವಿ ಎಂದು ಬಂದಿತ್ತು. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆಗ ಸ್ಯಾಂಟ್ರೋ ರವಿ ಇದ್ದದ್ದೇ ಬೇರೆ, ಈಗ ಇರೋದೆ ಬೇರೆ. ಆಗ ಅವನನ್ನು ನೋಡಿದವರು ಈಗ ಗುರುತು ಹಿಡಿಯಲ್ಲ. ಕೈಗೆ ಕಾಸು ಬಂದ ಮೇಲೆ ತನ್ನ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದ ರವಿ. ಈಗ ತಲೆಗೆ ಟೋಕನ್ ಹಾಕಿಕೊಂಡು, ಕನ್ನಡಕ ಹಾಕಿಕೊಂಡು ಟಿಪ್‌ ಟಾಪ್‌ಗಿ ಕಾಣುವ ಸ್ಯಾಂಟ್ರೋ ರವಿ, ಓರ್ವ ಪಿಂಪ್​! ಮಂಡ್ಯ ಬಿಟ್ಟು ಮೈಸೂರಿಗೆ ತೆರಳಿದವ ವೇಶ್ಯಾವಾಟಿಕೆ ದಂಧೆಯಲ್ಲಿ ಚಿಗುರಿದ್ದ. ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

    ಪಿಯುಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ 1995ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸ್ಯಾಂಟ್ರೋ ರವಿ, ಪುಡಿರೌಡಿಗಳ ಜೊತೆ ಸೇರಿ ಅಸಭ್ಯತನ ಮೆರೆಯುತ್ತಿದ್ದ. 2000ನೇ ಇಸವಿಯಿಂದಲೂ ಸ್ಯಾಂಟ್ರೋ ರವಿ ದಂಧೆ ಮಾಡುತ್ತಿದ್ದ. ಮೈಸೂರು, ಬೆಂಗಳೂರು ಸೇರಿ ನಾನಾ ಕಡೆ ಈತನ ವಿರುದ್ಧ ಪ್ರಕರಣಗಳಿವೆ. ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದಾನೆ. ತನ್ನ ಕೃತ್ಯ ಬಯಲು‌ ಮಾಡಿದವರ ವಿರುದ್ಧ ರಾಜಕೀಯ ಪ್ರಭಾವ ಬಳಸಿ ಕೇಸ್‌ ದಾಖಲಿಸುತ್ತಿದ್ದ. ಇಂದು ಹೆಮ್ಮರವಾಗಿ ಬೆಳೆದಿರುವ ಸ್ಯಾಂಟ್ರೋ ರವಿಗೆ ಬೆಂಗಳೂರಿನಲ್ಲಿ 3 ಮನೆ, ವಿಲ್ಸನ್‌ ಗಾರ್ಡನ್‌, ಆರ್‌ಆರ್‌ ನಗರ ಹಾಗೂ ಮಲ್ಲೇಶ್ವರಂನಲ್ಲೂ ಮನೆಗಳಿವೆ. ಮೈಸೂರಿನಲ್ಲೂ ಮನೆಗಳಿವೆ ಎಂದು ತಿಳಿದುಬಂದಿದೆ. ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದ. ಈತನಿಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಸ್ಯಾಂಟ್ರೋ ರವಿ ಬಂಧನಕ್ಕೆ ಬಲೆ ಬೀಸಿದ್ದರು. ಕೊನೆಗೂ ಸಿಕ್ಕಿಬಿದ್ದಿದ್ದಾನೆ.

    ಸ್ಯಾಂಟ್ರೋ ರವಿಯನ್ನ ಅರೆಸ್ಟ್​ ಮಾಡಿದ ಬಳಿಕ ಬೆಂಗಳೂರಿಗೆ ತೆರಳುವೆ, ಅಲ್ಲಿವರೆಗೂ ಮೈಸೂರಲ್ಲೇ ಇರುವೆ: ಎಡಿಜಿಪಿ ಅಲೋಕ್ ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts