More

    ಸಂಸ್ಕಾರಯುತ ಬದುಕು ಸಾಗಿಸಲಿ

    ರಾಯಬಾಗ: ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆದು ಸಂಸ್ಕಾರಯುತ ಬದುಕು ಸಾಗಿಸಬೇಕು ಎಂದು ರಬಕವಿಯ ಸಾಹಿತಿ ಶಿವಾನಂದ ದಾಶಾಳ ಹೇಳಿದರು. ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ವಚನ ಪಿತಾಮಹ ಡಾ..ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ರಾಯಬಾಗ ಮತ್ತು ಹಿರಾಬಾಯಿ ಭರಮಾ ಚೌಗುಲೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಡಾ..ಗು.ಹಳಕಟ್ಟಿ ಜನ್ಮೋತ್ಸವ ಹಾಗೂ ವಚನ ಸಾಹಿತ್ಯ ಸಂಶೋಧನೆ ಶತಮಾನೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಅಂತರ್ ಪದವಿ ಕಾಲೇಜು ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಹಳಕಟ್ಟಿ ಅವರ ಜೀವನ ಸಿದ್ಧಾಂತ, ಶರಣರ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದರು.

    ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ವಿ.ಎಸ್.ಮಾಳಿ, ಡಾ..ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಂ.ಪಾಟೀಲ, ನಿವತ್ತ ಪ್ರಾಧ್ಯಾಪಕ ಎಚ್.ಕೆ.ಗುರವ, ವಸಂತ ಹೊಸಮನಿ, ಸಾಗರ ಝೆಂಡೆನ್ನವರ, ಪಿ.ಡಿ.ಲಂಗೋಟೆ ಇತರರಿದ್ದರು. ಪ್ರಾಚಾರ್ಯ ಎಸ್.ಎಸ್.ದಿಗ್ಗೇವಾಡಿ ಸ್ವಾಗತಿಸಿದರು, ಆರ್.ವೈ.ಯಮಗರ ನಿರೂಪಿಸಿದರು, ಬಿ.ಬಿ.ನಾಟಿಕರ ವಂದಿಸಿದರು.

    ಸ್ವಾತಿ ಪ್ರಥಮ: ಬೆಳಗಾವಿ ಲಿಂಗರಾಜ ಕಾಲೇಜನ ಸ್ವಾತಿ ಕುರುಬರ ಪ್ರಥಮ, ಸಂಕೇಶ್ವರ ಎಸ್‌ಎಸ್ ಕಾಲೇಜ್‌ನ ಶ್ವೇತಾ ಇನಾಮದಾರ ದ್ವಿತೀಯ, ಬೆಳಗಾವಿ ಆರ್.ಎಲ್.ಲಾ ಕಾಲೇಜ್‌ನ ಮಲ್ಲಿಕಾರ್ಜುನ ಪೂಜಾರಿ ತೃತೀಯ, ಜಮಖಂಡಿ ಸರ್ಕಾರಿ ಮಹಿಳಾ ಕಾಲೇಜನ ರೂಪಾ ಪಾಲಬಾವಿ ಚತುರ್ಥ ಹಾಗೂ ಜಮಖಂಡಿ ಬಿಎಲ್‌ಡಿ ಕಾಲೇಜನ ಶಿಲ್ಪಾ ಕುಂದರಗಿ ಐದನೇ ಸ್ಥಾನ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts