More

    ಸಂಕೇತ, ವೈಷ್ಣವಿ, ಚಿರಂತ, ದಾನೇಶ್ವರಿ ಚಾಂಪಿಯನ್

    ಧಾರವಾಡ: ನಗರದ ಕಿಲ್ಲಾದ ಶ್ರೀ ಬಾಲಮಾರುತಿ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 17 ವಯೋಮಿತಿಯ ಬಾಲಕ- ಬಾಲಕಿಯರ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಪಂದ್ಯಾವಳಿ ಮಂಗಳವಾರ ನಡೆಯಿತು.
    17 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ದಾನೇಶ್ವರಿ ಕಮ್ಮಾರ (ಧಾರವಾಡ), ರಿಶ್ಯಾ ಕೆ. (ಬೆಂಗಳೂರು ದಕ್ಷಿಣ) ಹಾಗೂ ಸೋನಿಕಾ ಗೌಡ (ಬೆಂಗಳೂರು ದಕ್ಷಿಣ) ಅನುಕ್ರಮ ಸ್ಥಾನ ಗಳಿಸಿ ವೈಯಕ್ತಿಕ ವೀರಾಗ್ರಣಿಯಾದರು.
    17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಚಿರಂತ್ ಶೆಟ್ಟಿ (ಬೆಂಗಳೂರು ದಕ್ಷಿಣ), ಗಂಗಾಧರ ಮಟ್ಟಿ (ಧಾರವಾಡ), ಶ್ರೇಯಸ್ ಮಾನೆ (ಧಾರವಾಡ) ಅನುಕ್ರಮ ಸ್ಥಾನ ಗಳಿಸಿ ವೈಯಕ್ತಿಕ ವೀರಾಗ್ರಣಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts