More

    ಹಾವು ಸೆರೆ ಹಿಡಿಯುವ ವೇಳೆ ನಾಗಿಣಿ ನೃತ್ಯ ಮಾಡಿದ ಮಹಿಳಾ ಕಾರ್ಮಿಕರು !

    ಶಿವಮೊಗ್ಗ: ನಗರದ ಹೊನ್ನಾಳಿ ರಸ್ತೆಯ ಫ್ಲೈಓವರ್ ಪಕ್ಕ ಶಂಕರ ವಲಯದ ನರ್ಸರಿಯಲ್ಲಿ ಶುಕ್ರವಾರ ಸ್ನೇಕ್ ಕಿರಣ್ ಹಾವು ಹಿಡಿಯಲು ಹೋದಾಗ ಮಹಿಳಾ ಕಾರ್ಮಿಕರಿಬ್ಬರು ನಾಗಿಣಿ ನೃತ್ಯ ಮಾಡಿದ್ದು, ಸ್ಥಳದಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.
    ಶುಕ್ರವಾರ ಬೆಳಗ್ಗೆ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಅಡಿ ಉದ್ದದ ನಾಗರ ಹಾವು ಕಾಣಿಸಿಕೊಂಡಿತ್ತು. ಸಿಬ್ಬಂದಿ ನಾಗರಾಜ್ ಅವರು ಸ್ನೇಕ್ ಕಿರಣ್‌ಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಕಿರಣ್, ನಾಗರಹಾವು ರಕ್ಷಣೆ ಮಾಡಿ ಕಾಡಿಗೆ ಬಿಡಲು ಸನ್ನದ್ಧರಾಗುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ವರ್ತನೆ ಬದಲಿಸಿ ಜೋರಾಗಿ ಕಿರುಚಿದ್ದಾರೆ. ನಂತರ ನಾಗಿಣಿ ರೀತಿ ನೃತ್ಯ ಮಾಡಲಾರಂಭಿಸಿದ್ದಾರೆ.
    ಕಿರಣ್ ಹಾವು ಸೆರೆ ಹಿಡಿಯುವುದನ್ನು ನರ್ಸರಿಯಲ್ಲಿದ್ದ ಮಹಿಳೆಯರು ಸುತ್ತುವರಿದು ನೋಡುತ್ತಿದ್ದರು. ಆಗ ಅದೇ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರಾ ಎಂಬ ಇಬ್ಬರ ವರ್ತನೆ ಬದಲಾಯಿತು. ಇಬ್ಬರು ಜೋರಾಗಿ ಕೂಗಿಕೊಂಡು ಹಾವಿನಂತೆ ವರ್ತಿಸಿದ್ದಾರೆ. ನೆಲದ ಬಿದ್ದು ಹೊರಳಾಡಿದ್ದಾರೆ. ಇದರಿಂದ ಅಕ್ಕಪಕ್ಕದಲ್ಲಿದ್ದ ಮಹಿಳೆಯರು ಹೆದರಿಕೊಂಡಿದ್ದಾರೆ. ಇಬ್ಬರ ವರ್ತನೆಯಿಂದ ಕಂಗಲಾದ ಕಿರಣ್ ಮತ್ತು ಕೆಲಸ ಮಾಡುತ್ತಿದ್ದ ಸಿಬ್ಬಂದಿ ಒಂದು ಕ್ಷಣ ದಂಗಾಗಿ ನಿಂತಿದ್ದಾರೆ.
    ನಾಗರಹಾವು ಅಲ್ಲಿಯೇ ಬಿಟ್ಟುಬಿಡು: ಮಹಿಳೆಯರು ನಾಗಿನಿ ರೀತಿ ನೃತ್ಯ ಮಾಡುವುದನ್ನು ಕಂಡು ಕಿರಣ್ ಸಹಿತ ಅಲ್ಲಿದ್ದವರು ಆತಂಕಗೊಂಡಿದ್ದಾರೆ. ಕಿರಣ್ ಹಿಡಿದ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಸಮೀಪದಲ್ಲಿರುವ ಜಾಗದಲ್ಲಿ ಬಿಡಬೇಕು ನೃತ್ಯ ಮಾಡುತ್ತಿದ್ದ ಮಹಿಳೆಯರು ಸೂಚನೆ ನೀಡಿದ್ದಾರೆ. ಬಳಿಕ ಮಹಿಳೆಯರು ಹೇಳಿದ ಜಾಗದಲ್ಲೇ ಕಿರಣ್ ಹಾವನ್ನ ಬಿಟ್ಟಿದ್ದಾರೆ. ಇದಾದ ಮೇಲೆ ಮಹಿಳೆಯರು ಶಾಂತವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts