More

    ‘ಸಂಜು ವೆಡ್ಸ್​ ಗೀತಾ’ ಆಯ್ತು; ಈಗ ‘ಸಂಜು ಮತ್ತು ಗೀತಾ’ ಸರದಿ

    ಬೆಂಗಳೂರು: ಶಂಕರ್​ ನಾಗ್​ ನಿರ್ದೇಶನದ ‘ಗೀತಾ’ ಚಿತ್ರದ ಜನಪ್ರಿಯ ಪಾತ್ರಗಳು ಸಂಜು ಮತ್ತು ಗೀತಾ. ಆ ಚಿತ್ರದ ನಂತರ ಅದೆಷ್ಟೋ ಚಿತ್ರಗಳಲ್ಲಿ ನಾಯಕ-ನಾಯಕಿಯ ಪಾತ್ರ ಸಂಜು ಮತ್ತು ಗೀತಾ ಎಂದಾಗಿತ್ತು. ಅಷ್ಟೇ ಅಲ್ಲ, ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಅಭಿನಯದಲ್ಲಿ ‘ಸಂಜು ವೆಡ್ಸ್​ ಗೀತಾ’ ಎಂಬ ಚಿತ್ರ ತಯಾರಾಗಿ ಸೂಪರ್​ ಹಿಟ್​ ಸಹ ಆಗಿತ್ತು. ಈಗ ‘ಸಂಜು ಮತ್ತು ಗೀತಾ’ ಎಂಬ ಇನ್ನೊಂದು ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ.

    ಇದನ್ನೂ ಓದಿ: ಬದುಕು ಬದಲಾಗಬಹುದು, ಭಾವನೆಗಳಲ್ಲ … ಮತ್ತೆ ಬರಲಿದೆ ‘ಮಾಯಾಮೃಗ’

    ಆರ್​.ಕೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಂಜು ಮತ್ತು ಗೀತಾ’ ಚಿತ್ರದಲ್ಲಿ ವಿನಯ್​ ಕಾರ್ತಿಕ್​ ಮತ್ತು ಸನ್ಮಿತಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು, ರಾಘವೇಂದ್ರ ರಾಜಕುಮಾರ್​, ಭವ್ಯ, ಸ್ವಾತಿ, ದೊಡ್ಡರಂಗೇಗೌಡ ಮುಂತಾದ ಹಿರಿಯರು ಇದ್ದಾರೆ.

    ಇದೊಂದು ನವೀರಾದ ಪ್ರೇಮಕಥೆ ಎನ್ನುವ ಆರ್​ಕೆ, ‘ಕುಟುಂಬ ಸಮೇತ ನೋಡಬಹುದಾದ ಒಳ್ಳೆಯ ಚಿತ್ರ ಇದು. ಈ ಹಿಂದೆ ನನ್ನ ನಿರ್ದೇಶನದ ‘ಕಾಣೆಯಾಗಿದ್ದಾಳೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವಿನಯ್ ಕಾರ್ತಿಕ್ ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್​ ಒಪ್ಪುವಂತಹ ಕಥೆ ಇಲ್ಲಿದೆ. ಕಥೆಯನ್ನು ಐದು ಗುಲಾಬಿಗಳ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಕೆಂಪು ಗುಲಾಬಿ ಪ್ರೀತಿಯ ಸಂಕೇತ, ಹಳದಿ ಹೂವು ಸ್ನೇಹದ ಸಂಕೇತ. ಹೀಗೆ ಒಂದೊಂದು ಭಾವನೆಯನ್ನು ಒಂದೊಂದು ಹೂವಿನ ಮೂಲಕ ಹೇಳುವ ಪ್ರಯತ್ನವಾಗಲಿದೆ’ ಎನ್ನುತ್ತಾರೆ.

    ಈ ಚಿತ್ರದ ಮೂಲಕ ಪ್ರೀತಿಯನ್ನು ಬರೀ ಪ್ರೇಮಿಗಳು ಒಪ್ಪುವುದಷ್ಟೇ ಅಲ್ಲ, ಎರಡೂ ಕುಟುಂಬದವರೂ ಒಪ್ಪಬೇಕು ಎಂದು ಹೇಳುವುದಕ್ಕೆ ಹೊರಟಿದ್ದಾರಂತೆ. ‘ನಾವು ಏನೇ ಮಾಡಿದರೂ ಸಮಾಜದ ನಡುವೆ ಬದುಕಬೇಕು. ಹಾಗಾಗಿ, ಅಲ್ಲಿ ಸರಿಯಾಗಿರಬೇಕು. ಈ ಚಿತ್ರಕ್ಕೂ ‘ಸಂಜು ವೆಡ್ಸ್​ ಗೀತಾ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ ಜಾನರ್​ನ ಚಿತ್ರ. ಇದೇ ಬೇರೆ ಜಾನರ್​ನ ಚಿತ್ರ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು.

    ಇದನ್ನೂ ಓದಿ: ಬ್ರಹ್ಮಾಸ್ತ್ರ ಬಿಡ್ತಾರಾ? ಕರ್ಣ ಆಗ್ತಾರಾ? ಯಶ್​ ಮುಂದಿದೆ ಎರಡು ಆಯ್ಕೆಗಳು

    ‘ಸಂಜು ಮತ್ತು ಗೀತಾ’ ಚಿತ್ರದಲ್ಲಿ ‘ಮಜಾಭಾರತ’ದ ರಾಘವೇಂದ್ರ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಕೌಶಿಕ್​ ಸಂಗೀತ, ನಾಗರಾಜ್​ ಛಾಯಾಗ್ರಹಣವಿದೆ. ಈ ಚಿತ್ರವನ್ನು ಸಂಜಯ್ ಮಾಗನೂರು ನಿರ್ಮಿಸುತ್ತಿದ್ದಾರೆ.

    ಹಿಂದಿ ಬಾಕ್ಸ್​-ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ ಕಾಂತಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts