More

    ಕೇಂದ್ರ ಜಾಗೃತ ಆಯೋಗದ ಮುಖ್ಯ ಆಯುಕ್ತರಾಗಿ ಸಂಜಯ್​ ಕೊಠಾರಿ ನೇಮಕ; ಸಿಐಸಿಯಾಗಿ ಬಿಮಲ್ ಜುಲ್ಕಾ ಆಯ್ಕೆ

    ನವದೆಹಲಿ: ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿದ್ದ ಸಂಜಯ್​ ಕೊಠಾರಿ ಅವರನ್ನು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಮುಖ್ಯಸ್ಥ( ಮುಖ್ಯ ಆಯುಕ್ತರು)ರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ಇಂದು ಆಯ್ಕೆ ಮಾಡಿದೆ.

    ಹಾಗೇ ಇದೇ ಸಮಿತಿಯು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರನ್ನಾಗಿ ಬಿಮಲ್​ ಜುಲ್ಕಾ ಅವರನ್ನು ಆಯ್ಕೆ ಮಾಡಿದೆ. ಬಿಮಲ್​ ಜುಲ್ಕಾ ಅವರು ಮಾಹಿತಿ ಮತ್ತು ಪ್ರಸರಣ ಇಲಾಖೆಯ ಮಾಜಿ ಕಾರ್ಯದರ್ಶಿ. ಸದ್ಯ ಮಾಹಿತಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದು. ಸಮಿತಿಯ ಬಹುಮತದ ನಿರ್ಧಾರದಿಂದ ಮುಖ್ಯ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಸಂಜಯ್​ ಕೊಠಾರಿ ಮತ್ತು ಬಿಮಲ್​ ಜುಲ್ಕಾ ಇಬ್ಬರೂ ನಿವೃತ್ತ ಐಎಎಸ್​ ಅಧಿಕಾರಿಗಳು.

    ಕೊಠಾರಿಯವರು ಮುಂದಿನ ಸಿವಿಸಿ ಹಾಗೂ ಜುಲ್ಕಾ ಅವರು ಸಿಐಸಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಸುರೇಶ್ ಪಟೇಲ್​ ಅವರನ್ನು ಜಾಗೃತ ಆಯುಕ್ತರು ಹಾಗೂ ಅನಿತಾ ಪಾಂಡೋವ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿಕೊಳ್ಳಲು ಉನ್ನತ ಮಟ್ಟದ ಸಮಿತಿ ಬಹುಮತದಿಂದ ನಿರ್ಧಾರ ಮಾಡಿದೆ. ಸಮಿತಿಯ ನಿರ್ಧಾರದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಔಪಚಾರಿಕ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಕೇಂದ್ರ ಜಾಗೃತ ಆಯೋಗವು ಸ್ವಾಯತ್ತ ಸ್ಥಾನಮಾನವನ್ನು ಹೊಂದಿರುವ, ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿದೆ. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts