More

    ಬೆಂಗಳೂರಿಗೆ ಬಂದ ಸಂಜಯ್ ದತ್ ಮೊದಲ ಭೇಟಿ ಅಪ್ಪು ಮನೆಗೆ! ಫೋಟೋ ವೈರಲ್

    ಬೆಂಗಳೂರು: ಇಂದು ಬಹುನಿರೀಕ್ಷಿತ ಪ್ಯನ್ ಇಂಡಿಯಾ ಸಿನಿಮಾ ಕೆಜಿಎಫ್ 2′ ಟ್ರೈಲರ್ ರಿಲೀಸ್ ಆಗಿದ್ದು, ಈ ಚಿತ್ರದ ಹಲವು ತಾರೆಯರು ಬೆಂಗಳೂರಿಗೆ ಬಂದಿದ್ದರು. ಇನ್ನು, ಇದೇ ಕಾರಣಕ್ಕೆ ಬಾಲಿವುಡ್ ನಟ ಸಂಜಯ್ ದತ್ ಕೂಡಾ ಬೆಂಗಳೂರಿಗೆ ಆಗಮಿಸಿದ್ದು, ಬೆಂಗಳೂರಿಗೆ ಬಂದವರೇ ತಡ ಮಾಡದೆ ಕೆಜಿಎಫ್ 2′ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವ ಮೊದಲೇ ಅವರು ಸೀದಾ ಕರುನಾಡ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರು. ನಟ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿದ ಸಂಜಯ್ ದತ್ ಮೊದಲು ಅಪ್ಪು ಫೋಟೋಗೆ ನಮಿಸಿ, ಬಳಿಕ ಅವರ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
    ಇದೇ ವೇಳೆ ಸಂಜಯ್ ದತ್ ಅವರನ್ನು ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಸ್ವಾಗತಿಸಿತ್ತು. ಇನ್ನು, ಕೆಲ ಹೊತ್ತು ನಟ ಸಂಜಯ್ ದತ್ ಅವರೊಂದಿಗೆ ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ಮಾತುಕತೆ ನಡೆಸಿದ್ದಾರೆ. ಜತೆಗೆ, ನಟ ಸಂಜಯ್ ದತ್ ಜೊತೆಗೆ ನಟ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಪುತ್ರರು ನಟ ಯವರಾಜ್‌ಕುಮಾರ್, ನಟ ವಿನಯ್ ರಾಜ್‌ಕುಮಾರ್, ರಾಘಣ್ಣನ ಪತ್ನಿ ಮಂಗಳಾ ಅವರು ಫೋಟೋ ತೆಗೆಸಿಕೊಂಡಿದ್ದು, ಅವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

    ಇನ್ನು, ‘ಕೆಜಿಎಫ್ 2′ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಹೋಗದೆ ಮೊದಲು ದುಖದಲ್ಲಿರುವ ಪುನೀತ್ ರಾಜ್‌ಕುಮಾರ್ ಕುಟುಂಬವನ್ನು ಭೇಟಿ ಮಾಡಿದ್ದಕ್ಕೆ ನಟ ಸಂಜಯ್ ದತ್ ಅವರನ್ನು ಅಭಿಮಾನಿಗಳು ಹೊಗಳಿದ್ದಾರೆ. ನಟ ಸಂಜಯ್ ದತ್ ಅವರು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಕೆಜಿಎಫ್ 2′ ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್‌, ಬಾಲಿವುಡ್ ನಟ ಫರ್ಹಾನ್ ಅಖ್ತರ್ ಕೂಡಾ ಬೆಂಗಳೂರಿಗೆ ಆಗಮಿಸಿದ್ದು, ಅವರ ಕೆಲ ಫೋಟೋಗಳು ಸಹ ವೈರಲ್ ಆಗಿವೆ

    ಬೆಂಗಳೂರಿಗೆ ಬಂದ ಸಂಜಯ್ ದತ್ ಮೊದಲ ಭೇಟಿ ಅಪ್ಪು ಮನೆಗೆ! ಫೋಟೋ ವೈರಲ್ ಬೆಂಗಳೂರಿಗೆ ಬಂದ ಸಂಜಯ್ ದತ್ ಮೊದಲ ಭೇಟಿ ಅಪ್ಪು ಮನೆಗೆ! ಫೋಟೋ ವೈರಲ್ ಬೆಂಗಳೂರಿಗೆ ಬಂದ ಸಂಜಯ್ ದತ್ ಮೊದಲ ಭೇಟಿ ಅಪ್ಪು ಮನೆಗೆ! ಫೋಟೋ ವೈರಲ್

    ದಳಪತಿ ವಿಜಯ್ ನಿಧನ? ಏಡ್ಸ್ ರೋಗಿ ಅಜಿತ್? ಏನಾಗಿದೆ ಈ ಸ್ಟಾರ್ ನಟರ ಅಭಿಮಾನಿಗಳಿಗೆ?

    ಗಣೇಶ್ ಪುತ್ರಿಗೆ 13 ನೇ ಹುಟ್ಟು ಹಬ್ಬ, ಚಾರಿತ್ರ್ಯ ಬರ್ತ್​ಡೇ ಪಾರ್ಟಿ ಫೋಟೋಗಳು ವೈರಲ್

    RRR ಆಕರ್ಷಣೆ: ನಾಲ್ವರು ಅಭಿಮಾನಿಗಳ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts