More

    ಗೆದ್ದ ಹೃದಯವನ್ನು ಕೋವಿಡ್​ಗೆ ದಾನ ಮಾಡಿದ ಸಾನಿಯಾ ಮಿರ್ಜಾ

    ನವದೆಹಲಿ: ಭಾರತೀಯ ಮಹಿಳಾ ಟೆನಿಸ್​ ರಂಗದಲ್ಲಿ ತಮ್ಮದೇ ಆದ ರೂಪ-ಲಾವಣ್ಯ ಹಾಗೂ ಆಟದಿಂದ ಖ್ಯಾತರಾಗಿರುವ ಸಾನಿಯಾ ಮಿರ್ಜಾ ಇತ್ತೀಚೆಗೆ ತಾವು ಗೆದ್ದ ‘ಹೃದಯ’ವನ್ನು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ!

    ಸಾನಿಯಾ ಗೆದ್ದ ಹೃದಯ ಯಾವುದು? ಅವರು ದಾನ ಮಾಡಿದ್ದು ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಅಂತಾರಾಷ್ಟ್ರೀಯ ಟೆನಿಸ್​ ಮಹಾಒಕ್ಕೂಟ (ಐಟಿಎಫ್​) ಫೆಡ್​ ಕಪ್​ ಟೆನಿಸ್​ ಟೂರ್ನಿಯಲ್ಲಿ ತಾವು ಪ್ರತಿನಿಧಿಸುವ ರಾಷ್ಟ್ರದ ಪರ ಮೈದಾನದಲ್ಲಿ ದಿಟ್ಟ ಹೋರಾಟ ಸಂಘಟಿಸಿ, ಗೆಲುವಿನ ಬದ್ಧತೆ ಪ್ರದರ್ಶಿಸುವ ಆಟಗಾರ್ತಿಯರಿಗೆ ದ ಫೆಡ್​ ಕಪ್​ ಹಾರ್ಟ್​ ಅವಾರ್ಡ್​ ಅನ್ನು ನೀಡುತ್ತದೆ. 2 ಸಾವಿರ ಡಾಲರ್​ (1.51 ಲಕ್ಷ ರೂ.) ಬಹುಮಾನ ಮೊತ್ತ ಹೊಂದಿರುವ ಈ ಪ್ರಶಸ್ತಿಗಾಗಿ ಮೇ 1ರಿಂದ ಒಂದು ವಾರ ಐಟಿಎಫ್​ ಆನ್​ಲೈನ್​ನಲ್ಲಿ ವೋಟಿಂಗ್​ ಏರ್ಪಡಿಸಿತ್ತು.

    ಇದನ್ನೂ ಓದಿ: ಶೀಘ್ರದಲ್ಲಿ ತಾಪ್ಸೀ ಪನ್ನು ಕಲ್ಯಾಣ! ಮದುವೆ ಗಂಡು ಯಾರು?

    ಈ ಬಾರಿ ಏಷ್ಯಾ/ಓಷೇನಿಯಾ ಪ್ರದೇಶದಿಂದ ಆರು ಬಾರಿಯ ಗ್ರಾಂಡ್​ಸ್ಲಾಂ ಪ್ರಶಸ್ತಿ ವಿಜೇತೆ ಭಾರತದ ಸಾನಿಯಾ ಮಿರ್ಜಾ ಮತ್ತು ಇಂಡೋನೇಷ್ಯಾದ 16 ವರ್ಷದ ಪ್ರಿಸ್ಕಾ ಮ್ಯಾಡೆಲಿನ್​ ನುಗ್ರೊಹೋ ಹೆಸರುಗಳು ನಾಮಕರಣಗೊಂಡಿದ್ದವು.

    2018ರ ಅಕ್ಟೋಬರ್​ನಲ್ಲಿ ಪುತ್ರ ಇಜಾನ್​ಗೆ ಜನ್ಮ ನೀಡಿದ್ದರು. ಆನಂತರದಲ್ಲಿ ಟೆನಿಸ್​ ರಂಗದಿಂದ ದೂರವುಳಿದಿದ್ದರು. ಒಟ್ಟು ನಾಲ್ಕು ವರ್ಷಗಳ ಬಳಿಕ ಫೆಡ್​ ಕಪ್​ ಟೂರ್ನಿಯಲ್ಲಿ ಭಾರತದ ಜರ್ಸಿ ತೊಟ್ಟಿದ್ದ ಅವರು, ತಂಡವನ್ನು ವರ್ಲ್ಡ್​ ಪ್ಲೇಆಫ್​ ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೂ ಮುನ್ನ 2020ರ ಜನವರಿಯಲ್ಲಿ ಮತ್ತೆ ರಾಕೆಟ್​ ಹಿಡಿದಿದ್ದ ಅವರು ಹೋಬರ್ಟ್​ ಇಂಟರ್​ನ್ಯಾಷನಲ್​ ಟೂರ್ನಿಯಲ್ಲಿ ನಾಡಿಯಾ ಕಿಚೆನೋಕ್​ ಜತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಸಾನಿಯಾ ಈ ಬಾರಿ ನಾಮಕರಣಗೊಂಡಿದ್ದರು.

    ಇದನ್ನೂ ಓದಿ: ತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!

    ಮೂರು ಪ್ರದೇಶಗಳ ಗ್ರೂಪ್​ 1 ನಾಮನಿರ್ದೇಶಿತ ಸ್ಪರ್ಧಿಗಳ ಪರವಾಗಿ ಒಟ್ಟು 16,985 ಮತಗಳು ಆನ್​ಲೈನ್​ನಲ್ಲಿ ಚಲಾಯಿಸಲ್ಪಟ್ಟಿದ್ದವು. ಅವುಗಳ ಪೈಕಿ ಸಾನಿಯಾ ಮಿರ್ಜಾ ಪರ 10 ಸಾವಿರ ಮತಗಳು ಚಲಾವಣೆಗೊಂಡಿದ್ದವು!

    ಚಲಾವಣೆಗೊಂಡ ಒಟ್ಟಾರೆ ಮತಗಳ ಶೇ.60 ಮತಗಳನ್ನು ಗಳಿಸಿದ ಮೂಗುತಿ ಸುಂದರೆ ಫೆಡ್​ ಕಪ್​ ಹಾರ್ಟ್​ ಅವಾರ್ಡ್​ ಗೆದ್ದುಕೊಂಡು 1,51,858 ರೂ.ವನ್ನು ತಮ್ಮದಾಗಿಸಿಕೊಂಡಿದ್ದರು. ತನ್ಮೂಲಕ ಅವರು ಭಾರತ ಅಷ್ಟೇ ಅಲ್ಲ, ಇತರ ರಾಷ್ಟ್ರಗಳಲ್ಲೂ ಇರುವ ತಮ್ಮ ಜನಪ್ರಿಯತೆಯನ್ನು ಅವರು ಜಗಜ್ಜಾಹೀರುಗೊಳಿಸಿದ್ದರು. ಹಾಗೂ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನೂ ಗಳಿಸಿಕೊಂಡರು.

    ಇದನ್ನೂ ಓದಿ: ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!

    ಕೋವಿಡ್​ 19 ಲಾಕ್​ಡೌನ್​ನ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರಿ ತೊಂದರೆಗೆ ಒಳಗಾದವರಿಗೆ ನೆರವಾಗಲೆಂದು ಈ ಮೊತ್ತವನ್ನು ಅವರು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.

    ಯುರೋಪ್​/ಆಫ್ರಿಕಾ ಪ್ರದೇಶದಿಂದ ಅನ್ನೆಟ್​ ಕೋಂಟಾವಿಟ್​ (ಎಸ್ಟೋನಿಯಾ) ಮತ್ತು ಅಮೆರಿಕಾಸ್​ ಪ್ರದೇಶದಿಂದ ಮೆಕ್ಸಿಕೋದ ಫರ್ನಾಮಡಾ ಕಾಂಟ್ರೇರಸ್​ ಗೋಮೇಜ್​ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

    ಚೀನಾದ ವಿದ್ಯಾರ್ಥಿಗಳಿಗೆ ದೈಹಿಕ ಅಂತರ ಕಾಯ್ದುಕೊಳ್ಳುವ ಟೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts