More

    ಕಾನೂನು ಚೌಕಟ್ಟಿನಲ್ಲಿ ಜೀವನ ಸಾಗಿಸಿ

    ಕೆಂಭಾವಿ: ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಕಾನೂನಿನ ಚೌಕಟ್ಟಿನಲ್ಲಿ ಜೀವನ ಸಾಗಿಸಬೇಕಿದ್ದು ನಮ್ಮ ದೇಶದ ಕಾನೂನು ಅತೀ ಮಹತ್ವ ಪಡೆದಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಹುಸೇನ್ ಹೇಳಿದರು.

    ಹೆಗ್ಗನದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ನೆರವು ಸೇವಾ ಸಮಿತಿ ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಮಾಜ ಜೀವಿಯಾಗಿದ್ದು, ಸಮಾಜದಲ್ಲಿ ತನ್ನ ಸ್ಥಾನಮಾನ, ಘನತೆ ಗೌರವ ಉಳಿಸಿಕೊಳ್ಳಬೇಕಾದರೆ ಕಾನೂನಿನ ಅಡಿಯಲ್ಲಿ ಜೀವನ ನಡೆಸಬೇಕು. ಜನ್ಮ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂ ಹಲವು ರೀತಿಯ ಕಾನೂನುಗಳಿದ್ದು ಅದನ್ನು ಅರಿತು ಜೀವನ ನಡೆಸಬೇಕಾಗುತ್ತದೆ ಎಂದು ಹೇಳಿದರು.

    ಗ್ರಾಮೀಣ ಪ್ರದೇಶದ ಜನರಲ್ಲಿ ಕಾನೂನಿನ ಜಾಗೃತಿ ಮೂಡಿಸಲು ಇಂಥಾ ಕಾರ್ಯಕ್ರಮ ಬಹಳ ಸಹಕಾರಿಯಾಗಿದ್ದು ತಾಲೂಕಿನಲ್ಲಿ ಈಗ ಐದು ಕಾರ್ಯಕ್ರಮ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

    ಹಿರಿಯ ವಕೀಲ ವಿನಾಯಕಕುಮಾರ ಹಾಗೂ ಕೃಷ್ಣ ಕೊಂಗಲ್ ಅವರು ಕಾನೂನು ಮಹತ್ವ ಕುರಿತು ಮಾಹಿತಿ ನೀಡಿದರು. ಮುಖ್ಯಗುರು ರಾಮಚಂದ್ರ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕಸ್ತೂರೆಮ್ಮ ಚಂದ್ರಶೇಖರ, ವಕೀಲ ಚನ್ನಮಲ್ಲಪ್ಪ ಸಾಲಿಮನಿ, ಪದ್ಮಜಾ ಹಾಗೂ ದಿವ್ಯಾರಾಣಿ ಇದ್ದರು. ಗ್ರಾಪಂ ಕಾರ್ಯದರ್ಶಿ ಯಂಕನಗೌಡ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts