More

    ವಿಶ್ವಕರ್ಮನೆ ಜಗತ್ತಿನ ಸೃಷ್ಟಿಕರ್ತ: ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ.ಜಕಣಾಚಾರಿ ಅಭಿಮತ

    ಸಂಡೂರು: ನಾರಾಯಣಾಧಿ ದೇವತೆಗಳೆಲ್ಲರೂ ವಿಶ್ವಕರ್ಮನೆ ಜಗತ್ತಿನ ಸೃಷ್ಟಿಕರ್ತನೆಂದು ವಂದಿಸಿದ್ದಾರೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ.ಜಕಣಾಚಾರಿ ಹೇಳಿದರು.

    ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ದಿನೋತ್ಸವ ಉದ್ದೇಶಿಸಿ ಭಾನುವಾರ ಮಾತನಾಡಿದರು. ವಿಶ್ವಕರ್ಮ ಪದವೇ ಒಂದು ರೋಮಾಂಚನ. ಎಲ್ಲ ವೇದಗಳಿಗೆ ಮೂಲ ಪದನಾಮ ವಿಶ್ವಕರ್ಮ ಹಾಗೂ ಸಾಹಿತ್ಯಿಕ ಸೃಷ್ಟಿಯ ಮೂಲ ಪುರುಷ ವಿಶ್ವಕರ್ಮ. ರೈತರ ಕೃಷಿಗೆ ಬೇಕಾದ ಸಲಕರಣೆಗಳು, ರಾಜ, ಮಹಾರಾಜರಿಗೆ ಬೇಕಾದ ಆಸನಗಳು, ದೇವಸ್ಥಾನದ ಶಿಲ್ಪಿಗಳನ್ನು ತಯಾರಿಸುವ (ಜಕಣಾಚಾರಿ ವಂಶಸ್ಥರು) ನಾವು ಎಂದು ಹೇಳಿಕೊಳ್ಳುತ್ತೇವೆ. ಆದರೆ ರಾಜ್ಯಾದ್ಯಂತ 35-40 ಲಕ್ಷ ಜನಸಂಖ್ಯೆಯಿರುವ ವಿಶ್ವಕರ್ಮರಿಗೆ ಒಬ್ಬ ಶಾಸಕ, ಜಿಪಂ ಸದಸ್ಯನೂ ಇಲ್ಲದಿರುವುದು ನಾಚಿಕೆಗೇಡಿನ ವಿಷಯ. ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂದರು.

    ನಿವೃತ್ತ ಶಿಕ್ಷಕ ಎ.ವೃಷಬೇಂದ್ರಾಚಾರಿ ಮಾತನಾಡಿ, 17-18ನೇ ಶತಮಾನದಲ್ಲಿ ನಮ್ಮನ್ನು ಶೂದ್ರರನ್ನಾಗಿಸಿ ಶೋಷಣೆಗೊಳಪಡಿಸಲಾಯಿತು. ವಿಶ್ವಕರ್ಮರಿಗೆ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸಹಿತ ಅಧಿಕಾರವಿರಲಿಲ್ಲ. 1870ರಲ್ಲಿ ಚಿತ್ತೂರು ಕೋರ್ಟ್‌ನಲ್ಲಿ ಜಯಗಳಿಸಲಾಯಿತು. ಆ ನಂತರ ಧಾರವಾಡ, ಬಾಂಬೆ ಕೋರ್ಟ್‌ನಿಂದ ವಿಶ್ವಕರ್ಮರು ಸಹ ಪೂಜೆ ಮಾಡಲಿಕ್ಕೆ ಆರ್ಹರಿದ್ದಾರೆ ಎಂಬ ತಿರ್ಮಾನಗಳು ಹೊರಬಂದವು. ಬಳಿಕ 2ಎನಲ್ಲಿ ಸೇರಿಸಿ ಹಿಂದುಳಿದವರ ಪಟ್ಟಾ ಕೊಡಲಾಯಿತು. ವಿಶ್ವಕರ್ಮ ಎಂದರೆ ಪರಬ್ರಹ್ಮ ಎಂಬುದರ ಜತೆಗೆ ವಿಶ್ದವನ್ನೇ ನಿಯಂತ್ರಿಸುವ ಶಕ್ತಿಯಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಆಂಧ್ರದ ಡಿ.ಹಿರೇಹಾಳುವಿನ ಶ್ರೀಕಾಳಹಸ್ತೇಂದ್ರ ಸ್ವಾಮೀಜಿ, ಹೂವಿನಹಡಗಲಿಯ ವಾಸ್ತುಶಿಲ್ಪ ತಜ್ಞ ಡಾ.ಜಿ.ಬಿ. ಹಂಸನಂದಾಚಾರ್ಯರು, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ.ಜಯಣ್ಣ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಹಗರಿಬೊಮ್ಮನಹಳ್ಳಿ ಸಂಘದ ಅಧ್ಯಕ್ಷ ಬಿ.ಜಿ.ಬಡಿಗೇರ ಮಾತನಾಡಿದರು.

    ಸಮಾಜದ ಅಧ್ಯಕ್ಷ ಕೆ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. 3ನೇ ವಾರ್ಡಿನ ಪುರಸಭೆ ಸದಸ್ಯ ಕೆ.ವಿ.ಸುರೇಶ್, ಕುರುಬರ ಸಂಘದ ಅಧ್ಯಕ್ಷ ಕೆ.ಸತ್ಯಪ್ಪ, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ರಾಘವೇಂದ್ರ, ಡಿಎಸ್‌ಎಸ್ ಸಂಚಾಲಕ ರಾಮಕೃಷ್ಣ ಹೆಗಡೆ, ನಿವೃತ್ತ ಶಿಕ್ಷಕ ದಿವಾಕರ್ ಆಚಾರಿ, ನಿವೃತ್ತ ಸಂಗೀತ ಶಿಕ್ಷಕ ಜಗನ್ನಾಥ ಹೊರಪೇಟೆ, ಸಿರುಗುಪ್ಪ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ್ ಆಚಾರಿ, ಸ. ಕಾರ್ಯದರ್ಶಿ ಕೊಟ್ರೇಶ್ ಆಚಾರಿ, ಬಸವರಾಜ್, ಸಕ್ರಪ್ಪ ಆಚಾರಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts