More

    ತೆರಿಗೆ ಪಾಲು ಪಡೆಯಲು ಅಡ್ಡಿಯಾಗದಿರಿ

    ಸಂಡೂರು: ರಾಜ್ಯಗಳ ಮೇಲೆ ಒಕ್ಕೂಟ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಸಿಪಿಐ(ಎಂ)-ಸಿಐಟಿಯು ತಾಲೂಕು ಘಟಕ ಶುಕ್ರವಾರ ಮನವಿ ಸಲ್ಲಿಸಿದವು.

    ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಚೆನ್ನಬಸಯ್ಯ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತ ಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುವುದನ್ನು ನಿಲ್ಲಿಸಬೇಕು. ರಾಜ್ಯಗಳು ತೆರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯುವಲ್ಲಿ ಒಕ್ಕೂಟ ಸರ್ಕಾರ ಅಡ್ಡಿಯಾಗಬಾರದು. ಕರ್ನಾಟಕಕ್ಕೆ ಬರ ಪರಿಹಾರದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.

    ಇದನ್ನೂ ಓದಿ: ನನ್ನ ತೆರಿಗೆ ನನ್ನ ಹಕ್ಕು: ಕಾಂಗ್ರೆಸ್ ಪ್ರತಿಭಟನೆ

    ಒಕ್ಕೂಟ ಸರ್ಕಾರ ತನ್ನ ಮನಸ್ಸಿಗೆ ತೋಚಿದಂತೆ ರಾಜ್ಯ ಸರ್ಕಾರಗಳು ಸಾಲ ಪಡೆಯುವಂತೆ ಮಾಡುವುದನ್ನು ನಿಲ್ಲಿಸಬೇಕು. ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ವಿಭಾಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರದ ವಿಷಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಹಾಗೂ ಅವರ ಸಂವಿಧಾನಾತ್ಮಕ ಸ್ಥಾನದ ದುರುಪಯೋಗವನ್ನು ತಡೆಯಬೇಕು.

    ರಾಜ್ಯ ಶಾಸಕಾಂಗ ಅಂಗೀಕರಿಸಿದ ಶಾಸನಗಳನ್ನು ರಾಜ್ಯಪಾಲರು ತಡೆ ಹಿಡಿಯಬಾರದು. ವಿಳಂಬ ಮಾಡದೆ ಸಹಿ ಮಾಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಗಂಗಮ್ಮ ಲಕ್ಷ್ಮೀಪುರ, ಹುಲಿಗೆಮ್ಮ. ನಾಗಪ್ಪ ಗೊಲ್ಲಲಿಂಗಮ್ಮನಹಳ್ಳಿ, ಮುದಕಪ್ಪ, ಮಾರಪ್ಪ, ಭೀಮಪ್ಪ, ಎಸ್.ಪಕ್ಕೀರಪ್ಪ, ಡಿ.ಕುಮಾರಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts