More

    ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ

    ಸಂಡೂರು: ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ಕೋಚ್‌ಗಳ ಮಾರ್ಗದರ್ಶನ ಮಹತ್ವದ್ದಾಗಿದೆ ಎಂದು ಮುಖ್ಯ ಶಿಕ್ಷಕಿ ಅನೀಸ್ ಫಾತಿಮಾ ಹೇಳಿದರು. ತಾಲೂಕಿನ ತೋರಣಗಲ್‌ನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಸಾಧನೆ ಮಾಡಲು ಕೋಚ್‌ಗಳ ಮಾರ್ಗದರ್ಶನ ಮಹತ್ವ

    ಪ್ರಸಕ್ತಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಇತರ ಕ್ರೀಡೆಗಳಲ್ಲಿ ತಾಲೂಕು, ಜಿಲ್ಲಾ, ವಿಭಾಗೀಯ ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾಗಿ ಸಾಧನೆ ಮಾಡಿರುವುದು ಸಂತಸ ತಂದಿದೆ. ಸಾಧನೆಗೆ ಪಾಲಕರ, ಶಾಲೆಯ ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಪ್ರೋತ್ಸಾಹ ಅಡಗಿದೆ ಎಂದರು. ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಕೆ.ತಿಪ್ಪೇರುದ್ರ ಮಾತನಾಡಿದರು.
    ಶಿಕ್ಷಕ ಎರ‌್ರಿಸ್ವಾಮಿ ಮತ್ತು ವಿದ್ಯಾರ್ಥಿನಿಯರು ಸ್ವಾಮಿ ವಿವೇಕಾನಂದರ ಜನ್ಮ, ತತ್ವ, ಆದರ್ಶಗಳ ಕುರಿತು ರಚಿಸಿದ ಗೀತೆಗಳನ್ನು ಹಾಡಿದರು.ವಿವೇಕಾನಂದರ ಕುರಿತು ಯುವಜನತೆಗೆ ಪ್ರೇರಣೆ ನುಡಿಗಳನ್ನು ತಿಳಿಸಿದರು.

    ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕೊಲೆ, ಸುಲಿಗೆ, ಸೈಬರ್ ಕ್ರೈಂ ಅಂಕಿಅಂಶ ಬಿಡುಗಡೆ

    ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಸನ್ಮಾನ ಮಾಡಲಾಯಿತು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಲೀಲಾವತಿ, ರಾಷ್ಟ್ರ ಮಟ್ಟದ ಕ್ರೀಡಾಪಟು ಸುರೇಶ್, ಗೋಕುಲ್ ಸ್ಕ್ವೇರ್‌ನ ಸಿಇಒ ಅಜಯ್ ಮಂದಾನ್, ವಿಶ್ವಮೂರ್ತಿ, ಬಿಎಚ್‌ಇಒ ಶಿವಪ್ಪ, ಶಿಕ್ಷಕರಾದ ಸ್ನೇಹಲತಾ, ಶಶಿಕಲಾ, ದೊಡ್ಡಬಸವ, ಸಾವಿತ್ರಿ, ಜಬಿವುಲ್ಲಾ, ತರಬೇತುದಾರರಾದ ಪ್ರಕಾಶ್, ಮಹೇಂದ್ರ, ಹಳೆಯ ವಿದ್ಯಾರ್ಥಿಗಳಾದ ವಿನೋದ್, ದೇವರಾಜ್, ಶಿವಕುಮಾರ್, ಅಂಬರೀಶ್, ಶಿವರುದ್ರ, ಸುರೇಶ್, ತುಕಾರಾಂ, ಶೇಖರಾಜ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts